'ಎನ್.ಆರ್.ನಾಯಕರ ಕಾವ್ಯದ ಛಂದೋವಿನ್ಯಾಸ: ಒಂದು ನೋಟ’ ಆರ್.ಎಸ್. ನಾಯಕ ಅವರ ಅಧ್ಯಯನ ಕೃತಿಯಾಗಿದೆ. ಈ ಅಧ್ಯಯನದಲ್ಲಿ ಎನ್. ಆರ್. ನಾಯಕರ ಕಾವ್ಯದಲ್ಲಿರುವ ಪ್ರಾಸಾನುಪ್ರಾಸಗಳ ಮೇಳದ ಬಗ್ಗೆ, ಶ್ರೀಯುತರು ಅಂಶಗಣ ಛಂದ ಮತ್ತು ಮಾತ್ರಾಗಣ ಬಂಧಗಳನ್ನು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿದ ಬಗ್ಗೆ ಮತ್ತು ಕಾವ್ಯದಲ್ಲಿ ಅವರು ಮಾಡಿದ ಕೆಲವು ಪ್ರಯೋಗಗಳ ಬಗ್ಗೆ ಅಧ್ಯಯನಾಕಾಂಕ್ಷಿಗಳ ಗಮನ ಸೆಳೆಯುವ ಕಾರ್ಯವನ್ನಷ್ಟೆ ಮಾಡಲಾಗಿದೆ.
ಆರ್. ಎಸ್. ನಾಯಕ ಮೂಲತಃ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮದವರು. ಅವರು ಪ್ರಸ್ತುತ ಭಟ್ಕಳ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕುವೆಂಪು ವಿರಚಿತ ಶಶಾನ ಕುರುಕ್ಷೇತ್ರಂ : ಒಂದು ಅಧ್ಯಯನ (ವಿಮರ್ಶೆ) , ನೀಲಾಂಜನ (ವಿಮರ್ಶೆ) ಸಾಹಿತ್ಯ ರಸದೀವಿಗೆ (ವಿಮರ್ಶೆ), ಜಾಹೀರಾತಿನ ಹುಡುಗಿ (ಕವನ ಸಂಕಲನ), ಉದಾತ್ತನಾರಾಯಣ ಮತ್ತು ಇತರ ಲೇಖನಗಳು (ವಿಮರ್ಶೆ), ಶಬ್ದಮಣಿದರ್ಪಣ ಸಂಗ್ರಹ ಮತ್ತು ವಿವರಣ (ಹಳೆಗನ್ನಡ ವ್ಯಾಕರಣ) ೭. ಡಾ. ಎನ್. ಆರ್. ನಾಯಕರ ಕಾವ್ಯದ ...
READ MORE