ಕರ್ನಾಟಕದ ಅಭಿವೃದ್ಧಿಯ ಆಯಾಮಗಳು

Author : ಶಿವರಾಜ್ ಬಡಿಗೇರ್

Pages 176

₹ 150.00




Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಅಭಿವೃದ್ಧಿಯ ಮಾದರಿಗಳು ಕವಲುದಾರಿಯಲ್ಲಿವೆ. ವಿಶ್ವದ ಕೆಲವು ದೇಶಗಳು ಎಲ್.ಪಿ.ಜಿ ಗಳಿಂದ ಆರ್ಥಿಕತೆಯ ತೂಗುಯ್ಯಾಲೆಯಲ್ಲಿ ನಡುಗುತ್ತಿವೆ. ಜಾಗತೀಕ ಮಾರುಕಟ್ಟೆಯ ಲಾಭಕೋರತನದ ಮೇಲಾಟದಲ್ಲಿ ಎಲ್ಲ ದೇಶಗಳು ಸ್ಪರ್ದೆಗೆ ಬಿದ್ದು, ನಾವು ತಲುಪುವ  ಅಂತಿಮ ಇಂಡಿಯಾ ಸಹ ಕಾಡು ಎಂದರಿಯದೆ ನಿತ್ಯ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯ ನಮ್ಮ ಮುಂದಿರುವ ಅಭಿವೃದ್ಧಿಯ ಆಧ್ಯತೆಗಳಲ್ಲಿ ಹಲವು ಪಥಗಳ ರಸ್ತೆ ನಿರ್ಮಾಣ, ಮೇಲ್ ಸೇತುವೆಗಳು, ಮೆಟ್ರೋ ರೈಲುಗಳ ಎಸ್.ಇ.ಝಡ್.ಗಳ ಸ್ಥಾಪನೆ, ಫಲವತ್ತಾದ ಕೃಷಿ ಭೂಮಿಯ ಪರಿವರ್ತನೆಯ ಜೊತೆ ಮೂಲಭೂತ ಸೌಕರ್ಯ ಕಲ್ಪಿಸುವ ದಿಕ್ಕಿನಲ್ಲಿ ಸಾಗಿದೆ.  ಕೃಷಿ ಅವಲಂಬಿತ ದೇಶದಲ್ಲಿ ಕೃಷಿ ಕಾಲಗಳಾಗುತ್ತಿರುವುದು, ನಗರಕ್ಕೆ ಬರುವ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು, ಬಡವ-ಬಲ್ಲಿದರ ಕಂದಕ ಜಾಸ್ತಿಯಾಗುತ್ತಿರುವುದು, ಬೆಲೆಯೇರಿಕೆಯಿಂದ ತತ್ತರಿಸಿರುವ ಮಧ್ಯಮವರ್ಗದ ಜನರ ಬವಣೆಗಳು ಆತಂಕದ ವಿಷಯಗಳಾಗಿವೆ. ಸರ್ಕಾರಗಳು ನೀಡುತ್ತಿರುವ ಅಂಕಿ-ಅಂಶಗಳೇ ನಮ್ಮ ಅಭಿವೃದ್ಧಿಯ ಸಂಕೇತಗಳು ಎಂಬ ಬಗ್ಗೆ ವ್ಯಾಪಕ ಚರ್ಚೆಗಳೂ ಆಗಬೇಕಾದ ಸಂದರ್ಭದಲ್ಲಿ ಎಳೆವಯಸ್ಸಿನ ಸಂಶೋಧಕರ ಈ ಪುಸ್ತಕ ನಿಮ್ಮ ಮುಂದಿದೆ.  

ತಮ್ಮ ಜೀವನ ನಿರ್ವಹಣೆಯ ಜೊತೆಗೆ ತಾವು ಓದುತ್ತಿರುವ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಶೋಧಕರು ಕೃಷಿ, ಕೈಗಾರಿಕೆ, ನೀರಾವರಿ ಮತ್ತು ಕೆಲವು ಪ್ರದೇಶಗಳ ಸಮಾಜಶಾಸ್ತ್ರೀಯ ಅಧ್ಯಯನಗಳನ್ನು ದಾಖಲಿಸಿ ನಮ್ಮ ಮುಂದಿಟ್ಟಿದ್ದಾರೆ. ಇವರ ಅಂಕಿ-ಅಂಶಗಳು, ಕಂಡುಕೊಂಡ ಸತ್ಯಗಳು ಮುಂದಿನ ದಾರಿಯನ್ನು ತಿಳಿಸುವ ದಿಕ್ಸೂಚಿಗಳಾಗಿವೆ. ಈ ದಾರಿಯಲ್ಲಿ ಮತ್ತಷ್ಟು ತಳಸ್ಪರ್ಶಿ ಅಧ್ಯಯನ ನಮ್ಮ ದೇಶದ ಅಭಿವೃದ್ಧಿಯ ಹಲವು ಆಯಾಮಗಳನ್ನು ಅನಾವರಣ ಮಾಡಬಲ್ಲವೆನಿಸುತ್ತದೆ. 

ಶಿಕ್ಷಣ ಕೇವಲ ಪದವಿ ಪಡೆಯುವ ಕಸರತ್ತಾಗದೆ ನಮ್ಮ ಜೀವನ, ಅದರ ಗುಣಮಟ್ಟದ ಮಾಪಕಗಳಾಗುತ್ತಿರುವುದು ಸಂತಸದ ಸಂಗತಿ, ಈ ದಾರಿಯಲ್ಲಿರುವ ಇಂಥ ಕೃತಿಯನ್ನ ಶಿವರಾಜ್ ಬಡಿಗೇರ್ ಬಹಳ ಅರ್ಥಪೂರ್ಣವಾಗಿ ಸಂಪಾದಿಸಿದ್ದಾರೆ.  

Related Books