ಡಾ. ಗೋವಿಂದರಾಜ ತಳಕೋಡ ಅವರ ಕೃತಿ-ಕನ್ನಡ ಸಾಹಿತ್ಯ ವಿಮರ್ಶೆಗೆ ಡಾ. ಜಿ.ಎಸ್. ಆಮೂರವರ ಕೊಡುಗೆ. ವಿಮರ್ಶೆ ಕುರಿತು ಸಂಶೋಧನಾತ್ಮಕ ವಿಚಾರವೇ ಈ ಕೃತಿ. ‘ಕ್ರಿಟಿಕ್ ಆನ್ ದಿ ರನ್’ ಸೇರಿದಂತೆ 14 ಇಂಗ್ಲಿಷ್ ಕೃತಿಗಳು ಹಾಗೂ ಭುವನದಭಾಗ್ಯ, ಆಧುನಿಕ ಕನ್ನಡ ಸಾಹಿತ್ಯದ ವಿರಾಟ್ ಪುರುಷ (ಶ್ರೀರಂಗ ಸಾರಸ್ವತ ಸಮೀಕ್ಷೆ) ಸೇರಿದಂತೆ ಇತರೆ ಕನ್ನಡ ಕೃತಿಗಳು ಹೀಗೆ ಒಟ್ಟು 20 ಕೃತಿಗಳನ್ನು ಲೇಖಕರು ವಿಮರ್ಶೆಗೆ ಒಳಪಡಿಸಿದ್ದಾರೆ. ಹೀಗಾಗಿ, ಕನ್ನಡ ವಿಮರ್ಶೆ ವಲಯದಲ್ಲಿ ಈ ಕೃತಿಯು ಶ್ರೇಷ್ಠ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ವಿಮರ್ಶೆಯ ತಮ್ಮದೇ ಆದ ಮಾನದಂಡಗಳ ಮೂಲಕ ಕೃತಿ-ಕೃತಿಕಾರ ಹಿನ್ನೆಲೆಯಲ್ಲಿ ವಿಮರ್ಶೆಯ ಆಯಾಮಗಳನ್ನು ವಿಸ್ತರಿಸಿದ ಖ್ಯಾತಿ ಆಮೂರರಿಗೆ ಸಲ್ಲುತ್ತದೆ. ಆಮೂರರ ಅಭಿರುಚಿ, ಮೌಲ್ಯಗಳು, ಭಾವನೆಗಳು, ತೀರ್ಮಾನಗಳು ..ಹೀಗೆ ಎಲ್ಲ ಆಯಾಮಗಳ ಮೂಲಕ ಆಮೂರರ ವ್ಯಕ್ತಿತ್ವವನ್ನುಕಟ್ಟಿಕೊಡುವ ಕೃತಿ ಇದಾಗಿದೆ.
©2024 Book Brahma Private Limited.