ಕರ್ನಾಟಕದ ಕಲೆ ವಾಸ್ತುಶಿಲ್ಪದ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ಅಧ್ಯಯನ ಮಾಡುವುದಕ್ಕೆ ಅವಕಾಶಗಳಿವೆ. ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕರ್ನಾಟಕ ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ. “ದೇಶ ಸುತ್ತು ಕೋಶ ಓದು” ಎಂಬ ನಾಣ್ಣುಡಿಯಂತೆ ಕರ್ನಾಟಕವನ್ನು ಸುತ್ತಿ ಪರಂಪರೆಯನ್ನು ತಿಳಿಯುವ ಹಂಬಲದಿಂದ ನಾನು ರಾಮಾಯಣ ಕಾಲದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಸ್ಥಳ, ಶಿಲಾಯುಗ ಕಾಲದ ಜನರ ವಾಸಸ್ಥಳ ಹಾಗೂ ಭವ್ಯ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಸ್ಥಳವೇ ಈ ಹಂಪಿಯನ್ನು ಆಯ್ದುಕೊಂಡೆನು. ಸುಮಾರು 2009 ರಿಂದಲೂ ಪ್ರತಿವರ್ಷ ಹಂಪಿಗೆ ಭೇಟಿ ನೀಡುತ್ತಿದ್ದೆ. ಪ್ರತೀ ಸಲವೂ ಒಂದೊಂದು ಹೊಸ ಹೊಸ ವಿಷಯಗಳನ್ನು ಕಲಿಯಲು ಅಲ್ಲಿ ಪ್ರೇರಣೆ ಸಿಗುತ್ತಿತ್ತು. ಹಂಪಿಯ ಕಲೆ ಮತ್ತು ವಾಸ್ತುಶಿಲ್ಪ ಯಾವಾಗಲೂ ನನ್ನನ್ನು ಸೆಳೆಯುತ್ತಿತ್ತು. ಹಂಪಿಯ ಅವಶೇಷಗಳ ಕುರಿತು ಅನೇಕ ಸಂಶೋಧನೆಗಳು ಕೂಡಾ ನಡೆದಿವೆ. ಪ್ರಸ್ತುತ ಕೂಡಾ ನಡೆಯುತ್ತಿವೆ. ಈ ಆನೆಗುಂದಿ ಮತ್ತು ಹಂಪಿಯಲ್ಲಿರುವ ಸ್ಮಾರಕಗಳ ಕುರಿತು ಒಂದು ಚಿಕ್ಕ ಕೃತಿಯನ್ನು ರಚಿಸಿ ನಮ್ಮ ವೈಭವ ಹಂಪಿಯ ಬಗ್ಗೆ ಅಧ್ಯಯನವನ್ನು ಮಾಡಿ ಇಲ್ಲಿರುವ ಕಲೆ ಮತ್ತು ವಾಸ್ತುಶಿಲ್ಪದ ಮಾಹಿತಿಯನ್ನು ಜನ ಸಾಮಾನ್ಯರಿಗೆ ಈ ಕೃತಿಯ ಮೂಲಕ ತಿಳಿಸುವ ಮೂಲ ಉದ್ದೇಶವಾಗಿದೆ.
ನಾಗರಾಜ ಕಾಪಸಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೀರನಗಡ್ಡಿ ಗ್ರಾಮದವರು. ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಗೋಕಾಕ್‌ನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಕಲ್ಲೋಳಿಯಲ್ಲಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಇತಿಹಾಸ ಮತ್ತು ಮರಾತತ್ವಶಾಸ್ತ್ರ ಪದವಿ, ಪಿ.ಜಿ. ಡಿಪ್ಲೋಮಾ ಇನ್ ಆರ್ಟ್ ಹಿಸ್ಟರಿ ಪದವಿಯನ್ನು ಪಡೆದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬಿ.ಎಡ್., ಶಿಕ್ಷಣ ಮತ್ತು ಪಿ.ಜಿ.ಡಿಪ್ಲೋಮಾ ಇನ್ ಟೂರಿಸಂ ಪದವಿಯನ್ನು ಪಡೆದರು. ಒಂದು ವರ್ಷಗಳ ಕಾಲ ಗೋಕಾಕ್ ಜೆ.ಎಸ್.ಎಸ್. ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವರು . ...
READ MORE