‘ಕಾವ್ಯಪ್ರತಿಮೆ’ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ಕೃತಿ. ಕಾವ್ಯದಲ್ಲಿ ಪ್ರತಿಮೆಗಳ ಸ್ವರೂಪ ಕುರಿತ ಚಿಂತನೆಗಳ ಅಧ್ಯಯನವನ್ನು ಈ ಕೃತಿಯು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಯು.ಆರ್. ಅನಂತಮೂರ್ತಿ, ಲಕ್ಷ್ಮೀನಾರಾಯಣ ಭಟ್ಟರು ಕನ್ನಡದ ಪ್ರಸಿದ್ದ ಕವಿ, ವಿಮರ್ಶಕರು. ಅಪಾರವಾದ ವಿದ್ವತ್ತು. ಜೊತೆಗೆ ರಸಗ್ರಹಣ ಶಕ್ತಿ ಈ ಎರಡೂ ಕಾವ್ಯಪ್ರತಿಮೆಯನ್ನು ನಮ್ಮ ಕಾಲದ ಮುಖ್ಯ ಕೃತಿಗಳಲ್ಲಿ ಒಂದೆನ್ನಿಸುವಂತೆ ಮಾಡಿವೆ. ತೀ. ನಂ.ಶ್ರೀ ಅವರ ‘ಭಾರತೀಯ ಕಾವ್ಯ ಮೀಮಾಂಸೆ’ ಗ್ರಂಥದಂತೆ ಭಟ್ಟರ ಕಾವ್ಯಪ್ರತಿಮೆಯೂ ‘ಒಂದು ಆಚಾರ್ಯ ಕೃತಿ’ ಎನ್ನಬಹುದು’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.