ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ

Author : ಎಂ. ಮರಿಯಪ್ಪ ಭಟ್

Pages 279

₹ 3.00




Year of Publication: 1988
Published by: ವಿಶ್ವ ಕನ್ನಡ ಸಮ್ಮೇಳನ
Address: 14- 3ಎ, ನೃಪತುಂಗ ರಸ್ತೆ, ಬೆಂಗಳೂರು-560002

Synopsys

ಲೇಖಕ ಎಂ. ಮರಿಯಪ್ಪ ಭಟ್ಟ ಅವರ ಕೃತಿ ʼಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆʼ. ಇದು ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಗ್ರಂಥಮಾಲೆಯಲಲಿ ಪ್ರಕಟಗೊಂಡಿದೆ. ಕನ್ನಡ ಭಾಷೆಯ ಸಾಹಿತ್ಯದ ಹುಟ್ಟು, ಬೆಳವಣಿಗೆ ಹಾಗೂ ಇತಿಹಾಸದ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಕನ್ನಡ ಭಾಷೆಯ ಇತಿಹಾಸ, ಕವಿರಾಜ ಮಾರ್ಗ ೯ನೆಯ ಶತಮಾನ, ಪೂರ್ವದ ಹಳೆಗನ್ನಡ- ಗದ್ಯ ಸಾಹಿತ್ಯ, ಚಂಪೂ ಕಾವ್ಯಗಳು, ಇತರ ಚಂಪೂ ರಚನಕಾರರು, ಶಾಸನ ಸಾಹಿತ್ಯ, ಶತಕ ಸಾಹಿತ್ಯ, ಲಕ್ಷ್ಮಣ ಸಾಶ್ತ್ರಗಳು, ಶಾಸ್ತ್ರೀಯ ಸಾಹಿತ್ಯ, ನಡುಗನ್ನಡ ಸಾಹಿತ್ಯ, ನಡುಗನ್ನಡ ಮಹಾಕವಿಗಳು, ಹರಿದಾಸ ಸಾಹಿತ್ಯ, ಜಾನಪದ ವಾಙ್ಮಯ, ಹಾಗೂ ಹೊಸಗನ್ನಡ ಸಾಹಿತ್ಯ ಹೀಗೆ ಒಟ್ಟು ೧೩ ಶೀರ್ಷಿಕೆಗಳಲ್ಲಿ ವಿಚಾರಗಳನ್ನು ಹೇಳಲಾಗಿದೆ.

About the Author

ಎಂ. ಮರಿಯಪ್ಪ ಭಟ್
(27 July 1905 - 21 March 1980)

ದ್ರಾವಿಡ ಭಾಷಾ ವಿದ್ವಾಂಸ, ಕನ್ನಡದ ಉದ್ದಾಮ ಪಂಡಿತರಾದ ಎಂ. ಮರಿಯಪ್ಪ ಭಟ್. (ಜನನ: 1905 ಜುಲೈ 27ರಂದು ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ತಂದೆ ಗೋವಿಂದ ಭಟ್ಟರು, ತಾಯಿ ಕಾವೇರಮ್ಮ. ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ಧಾರೆ. ಅವರು ಪರಿಷ್ಕರಿಸಿದ ಕನ್ನಡ ಕಿಟೆಲ್ ನಿಘಂಟನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದ್ದು ಕನ್ನಡ ಸಾಹಿತ್ಯ ಓದುಗರಿಗೆ ಬಹುದೊಡ್ಡ ಕೊಡುಗೆಯಾಗಿದೆ. ಅಲ್ಲದೆ, ಈ ಕಿಟೆಲ್ ಕನ್ನಡ – ಇಂಗ್ಲಿಷ್ ನಿಘಂಟುವಿನ ನಾಲ್ಕು ಸಂಪುಟಗಳು ಮಾತ್ರವಲ್ಲದೆ, ದ್ರಾವಿಡಿಯನ್ ...

READ MORE

Related Books