ಸುರೇಶ ನಾರಾಯಣ ನಾಯ್ಕ ಅವರ ‘ಸಂಶೋಧನ ದೀಪ’ ಕೃತಿಯು ಸಂಶೋಧನೆಯ ಕಾರ್ಯದಲ್ಲಿ ನಿರತರಾಗಲಿಚ್ಛಿಸುವವರಿಗೆ ಸಾಕಷ್ಟು ಉತ್ತಮ ಮಾಹಿತಿಯನ್ನು ಒದಗಿಸುತ್ತದೆ. ಆರಂಭದಲ್ಲಿ ಸಂಶೋಧನೆಯ ವ್ಯಾಖ್ಯೆ, ಅರ್ಥ, ವ್ಯಾಪ್ತಿ, ಸ್ವರೂಪ, ಲಕ್ಷಣ, ಪ್ರಯೋಜನ, ಸಂಶೋಧನೆಯ ಹಂತಗಳು ಇತ್ಯಾದಿಗಳನ್ನು ಸಂಕ್ಷೇಪದಲ್ಲಿ ವಿವರಿಸಲಾಗಿದೆ.
ಹೀಗೆ ಪೂರ್ವ ಘಟ್ಟದಲ್ಲಿ ಸಂಶೋಧನ ಕ್ಷೇತ್ರದ ಸಮಗ್ರ ವಿವೇಚನೆಯನ್ನು ಮಾಡಿ ನಂತರ ಸಂಶೋಧನ ಮಹಾಪ್ರಬಂಧದ ರಚನೆಗೆ ಬೇಕಾಗುವ ಎಲ್ಲ ಅವಶ್ಯಕ ಮಾಹಿತಿಗಳನ್ನು ಈ ಕೃತಿ ಒದಗಿಸುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಪದವಿಗಾಗಿ ಸಂಶೋಧನೆಯನ್ನು ಕೈಗೊಳ್ಳಬೇಕಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅವಶ್ಯಕವಾಗಿ ತಿಳಿದುಕೊಂಡಿರಬೇಕಾದ ಸೈದ್ಧಾಂತಿಕ ಮಾಹಿತಿಯನ್ನು ಈ ಕೃತಿ ಒದಗಿಸುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಕನಿಷ್ಟಪಕ್ಷ ಏನನ್ನು ತಿಳಿದುಕೊಂಡಿಬೇಕೆಂಬುದಕ್ಕೆ ಡಾ. ಸುರೇಶ ನಾಯ್ಕ ಅವರ ಈ ಕೃತಿ ಸಹಾಯಕವಾಗಿದೆ. ಸಂಶೋಧನ ಕ್ಷೇತ್ರದ ವೈಧಾನಿಕತೆ, ಸೈದ್ಧಾಂತಿಕತೆಯ ವಿವಿಧ ಆಯಾಮಗಳನ್ನು ತಿಳಿಸಿಕೊಡುವ ಈ ಕೃತಿ ಸಂಶೋಧಕರಿಗೆ ನಿಜಕ್ಕೂ ದಾರಿ ದೀಪವಾಗಿದೆ.
©2024 Book Brahma Private Limited.