‘ವೇದಗಳಲ್ಲಿ ಜನಸಾಮಾನ್ಯರು’ ಬಿ. ವಿ. ವೀರಭದ್ರಪ್ಪ ಅವರ ಅಧ್ಯಯನ ಕೃತಿಯಾಗಿದೆ. ವೇದಗಳಲ್ಲಿ ಉಲ್ಲೇಖವಾಗಿರುವಂತೆ ಜನಸಾಮಾನ್ಯನ ಚಿತ್ರಣವನ್ನು ಈ ಕೃತಿ ನೀಡುತ್ತದೆ. ನಮ್ಮ ಕಾಲದ ವೈಚಾರಿಕ ಮನಸ್ಸಿನ ಲೇಖಕರು ವೈದಿಕ ಸಾಹಿತ್ಯವನ್ನು ತುಂಬ ಎಚ್ಚರದಿಂದ ವೈಜ್ಞಾನಿಕ ದೃಷ್ಟಿಕೋನವನ್ನು ಮಗ್ಗುಲಲ್ಲೇ ಇರಿಸಿಕೊಂಡು ಅಧ್ಯಯನ ಮಾಡಿದ್ದಾರೆ.
ಬಿ.ವಿ. ವೀರಭದ್ರಪ್ಪನವರು ದಾವಣಗೆರೆಯ ನಿವಾಸಿ. ನಿವೃತ್ತ ಅಧ್ಯಾಪಕರು ಹಾಗೂ ಕನ್ಚಿಂನಡ ನಾಡು ಕಂಡ ಅಪರೂಪದ ಪ್ರಾಮಾನಿಕ ಚಿಂತಕರು. ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು. ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದ ಅವರು ಪುರೋಹಿತಶಾಹಿಯ ವಿರುದ್ಧವಾಗಿ "ವೇದಾಂತ ರೆಜಿಮೆಂಟ್" ಎಂಬ ಕೃತಿ ಬರೆದು ಜನಸಮೂಃ ಹೊಸ ಚಿಂತನೆ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿತ್ತು. ತಮ್ಮ 83ನೇ ವಯಸ್ಸಿನಲ್ಲಿ (21-09-2017 ರಂದು) ನಿಧನರಾದರು ...
READ MOREಹೊಸತು- ಸೆಪ್ಟೆಂಬರ್ -2003
'ವೇದ ಸುಳ್ಳಾದರೂ ಗಾದೆ ಸುಳ್ಳಾಗದು'. ಇದು ಬದುಕನ್ನು ಪ್ರಾಯೋಗಿಕವಾಗಿ ಎದುರಿಸಿದ ಜನಸಾಮಾನ್ಯರು ವೇದ ವೇದಗಳಲ್ಲ ಜನಸಾಮಾನ್ಯರು ಬಿ.ವಿ.ವೀರಭದ್ರಪ್ಪ ಕ್ಕಿಂತಲೂ ಹೆಚ್ಚು ತೂಕದ ಸತ್ಯ ಹೇಳಿದ್ದರಿಂದ ಹುಟ್ಟಿದ ಗಾದೆ ಇರಬಹುದು. ವೇದಗಳಲ್ಲಿ ಉಲ್ಲೇಖವಾಗಿರುವಂತೆ ಜನಸಾಮಾನ್ಯನ ಚಿತ್ರಣವನ್ನು ಈ ಕೃತಿ ನೀಡುತ್ತದೆ. ನಮ್ಮ ಕಾಲದ ವೈಚಾರಿಕ ಮನಸ್ಸಿನ ಲೇಖಕರು ವೈದಿಕ ಸಾಹಿತ್ಯವನ್ನು ತುಂಬ ಎಚ್ಚರದಿಂದ ವೈಜ್ಞಾನಿಕ ದೃಷ್ಟಿಕೋನವನ್ನು ಮಗ್ಗುಲಲ್ಲೇ ಇರಿಸಿಕೊಂಡು ಅಧ್ಯಯನ ಮಾಡಿದ್ದಾರೆ. ಚಾತುರ್ವಣ್ಯ್ರ ಸಮಾಜದ ಪ್ರಾರಂಭದ ಕಾಲದ ಜನಸಾಮಾನ್ಯರ ಬದುಕಿನ ಒಂದು ಪಕ್ಷಿನೋಟ ಇಲ್ಲಿದೆ.