ನಾಲ್ಕು ವೇದಗಳ ಕುರಿತು ಲೇಖಕ ಶೇಷ ನವರತ್ನ ಅವರು ಬರೆದ ಕೃತಿ ಇದು. ಭಾರತೀಯ ಪ್ರಾಚೀನ ಸಾಹಿತ್ಯ ಪರಂಪರೆಯಲ್ಲಿ ವೇದಗಳಿಗೆ ಪ್ರಮುಖ ಸ್ಥಾನವಿದೆ. ಭಾರತೀಯ ಇತಿಹಾಸವನ್ನೂ ಅವು ನಿರ್ಧರಿಸುತ್ತಾ ಬಂದಿವೆ. ಋಗ್ವೇದ, ಸಾಮವೇದ, ಯಜುರ್ವೇದ ಹಾಗೂ ಅಥರ್ವ ವೇದ-ಈ ನಾಲ್ಕೂ ವೇದಗಳು ವ್ಯಕ್ತಿಯ ವ್ಯಕ್ತಿಗತ ಹಾಗೂ ಸಾಮಾಜಿಕ ಬದಕುನ್ನು ನಿಯಮಗಳ ಚೌಕಟ್ಟಿನಡಿ ಇದ್ದು, ಮೀರದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಒಂದು ವೇಳೆ ಮೀರಿದರೆ ಜೀವನ ಸಾರ್ಥಕತೆ ಕಳೆದುಕೊಂಡು ಬದುಕು ಮುಕ್ತಿ ಕಾಣದೇ ಅತಂತ್ರವಾಗುತ್ತದೆ ಎಂಬ ನಂಬಿಕೆ ಬಲಗೊಳ್ಳುವಂತೆ ಮಾಡಿವೆ. ನಾಲ್ಕೂ ವೇದಗಳ ಮಹತ್ವ, ಅವುಗಳ ಅಧ್ಯಯನ ಹಾಗೂ ಆಚರಣೆಗಳ ಅಗತ್ಯವನ್ನು, ಅವುಗಳ ಸ್ವರೂಪವನ್ನು ತಿಳಿಸುವ ಕೃತಿ ಇದು.
ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು. ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ). ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...
READ MORE