ಸಗರನಾಡ ಸೌರಭ-ಹೈದ್ರಾಬಾದ್ -ಕರ್ನಾಟಕದ ಅವಿಭಾಜಿತ ಕಲಬರಗಿ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಜೇವರ್ಗಿ ತಾಲೂಕು ವ್ಯಾಪ್ತಿಯ ಪ್ರದೇಶವನ್ನು ಸಗರನಾಡು ಎಂದು ಕರೆಯುತ್ತಾರೆ. ಅಲ್ಲಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಅನಾವರಣಗೊಳಿಸುವ ಆಯ್ದ 35 ಸಂಶೋಧನಾತ್ಮಕ ಲೇಖನಗಳ ಸಂಗ್ರಹ ಕೃತಿ ಇದು. ರಾಜಗೋಪಾಲ ಎಂ. ವಿಭೂತಿ ಹಾಗೂ ಕೃಷ್ಣಾ ವಿ. ಸುಬೇದಾರ ಸಂಪಾದಕರು.
ಕೃತಿಯ ಮೊದಲ ಅಧ್ಯಾಯದಲ್ಲಿ ಸುರಪುರ ಸಂಸ್ಥಾನದ ಸುದೀರ್ಘ ಚರಿತ್ರೆಯನ್ನು ಒಳಗೊಂಡಿದೆ. ಎರಡನೇ ಅಧ್ಯಾಯದಲ್ಲಿ ಸಗರನಾಡು ಪ್ರದೇಶ ಕುರಿತಂತೆ ನಡೆದ ಸಂಶೋಧನೆಗಳು ಲೇಖನಗಳನ್ನು ಸಂಗ್ರಹಿಸಲಾಗಿದೆ. ಕೃಷ್ಣಾ-ಭೀಮಾ ನದಿ ಮಧ್ಯೆದ ಪ್ರದೇಶವು ಇಂದಿಗೂ ಸಂಶೋಧನೆ ದೃಷ್ಟಿಯಿಂದ ನಿರ್ಲಕ್ಷಿಸಲ್ಪಟ್ಟಿದೆ. ಕವಿಗಳು, ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳು ಅವಗಣನೆಗೆ ಗುರಿಯಾಗಿವೆ. ಜೈಮಿನಿ ಭಾರತದ ಕರ್ತೃ ಲಕ್ಷ್ಮೀಶ ಸೇರಿದಂತೆ ಇತರೆ ಕವಿಗಳ ಕಾಲ-ದೇಶಗಳ ಕುರಿತ ಸಂಶೋಧನೆಗಳು ನಡೆದಿಲ್ಲ. ಇತಿಹಾಸ ತಜ್ಞ ಡಾ. ಕೆ.ಪೆದ್ದಯ್ಯ ಅವರ ಸಂಶೋಧನಾತ್ಮಕ ಬರಹವೂ ಸೇರಿದಂತೆ ಇತರೆ ಬರಹಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಸಗರನಾಡು ವ್ಯಾಪ್ತಿಯ ಸಂಶೋಧನೆಗಾಗಿ ಈ ಕೃತಿಯು ಮಹತ್ವದ ಆಕರಗಳನ್ನು ಒದಗಿಸುತ್ತದೆ.
©2025 Book Brahma Private Limited.