ಲೇಖಕಿ ವಿಜಯಶ್ರೀ ಇಟ್ಟಣ್ಣವರ್ ಅವರು ಬರೆದ ಸಂಶೋಧನಾತ್ಮಕ ಕೃತಿ-ಕಂಬಳಿ. ಕೇವಲ ಹೊದಿಕೆಯಾಗಿ ಮಾತ್ರ ಕಂಬಳಿಯನ್ನು ಪರಿಗಣಿಸಬಾರದು. ಅದು ಒಂದು ಜನಾಂಗದ ಸಂಸ್ಕೃತಿಯ ಭಾಗವಾಗಿ ನೋಡಬೇಕು. ಜನಪದರ ರಕ್ಷಣೆಯಾಗಿಯೂ ಅದರ ಅಸ್ತಿತ್ವ ಇದೆ. ಕಂಬಳಿಗೆ ಒಂದು ಪರಂಪರೆಯೂ ಇದೆ. ಧಾರ್ಮಿಕ ಪಾವಿತ್ಯ್ರವೂ ಇದೆ. ಆರ್ಥಿಕತೆಯ ಪ್ರಮುಖ ಉದ್ಯೋಗವಾಗಿಯೂ ಪ್ರಮುಖವೆನಿಸಿದೆ. ಈ ಕೃತಿಯು ಅಧ್ಯಯನದ ಉದ್ದೇಶ-ಸ್ವರೂಪ-ವ್ಯಾಪ್ತಿ, ಅರ್ಥ-ವ್ಯಾಖ್ಯೆ-ಉಲ್ಲೆಖಗಳು, ಸಾಂಪ್ರದಾಯ-ನಂಬಿಕೆ- ಆಚರಣೆಗಳು, ಉದ್ಯಮ, ಸಮಾರೂಪ ಎಂಬ ಐದು ಅಧ್ಯಾಯಗಳಲ್ಲಿ ಕಂಬಳಿಯ ಸಾಂಸ್ಕೃತಿಕ ಮಹತ್ವವನ್ನು ಹೇಳಲಾಗಿದೆ. ಕಂಬಳಿಯ ಸುತ್ತಮುತ್ತ ಹಬ್ಬಿಕೊಂಡಿರುವ ಸಾಂಪ್ರದಾಯಿಕ ಆಚರಣೆ ಮತ್ತು ನಂಬಿಕೆಗಳ ವಿಶ್ಲೇಷಣೆ, ಕಂಬಳಿ ಉತ್ಪಾದನೆಯು ಒಂದು ಉದ್ಯಮವಾಗಿ ಬೆಳೆದು ಬಂದ ಬಗೆ, ಆಧುನಿಕ ತಂತ್ರಜ್ಞಾನ ಮತ್ತು ಜಾಗತೀಕರಣದ ಭರಾಟೆಯಲ್ಲಿಯೂ ಕಂಬಳಿ ಉದ್ಯಮದ ಏಳುಬೀಳುಗಳ ಕುರಿತ ವಿವರಗಳಿವೆ. ಆಕರಗಳಲ್ಲಿ ವೈವಿಧ್ಯತೆ, ಅಧ್ಯಯನದಲ್ಲಿ ಶಿಸ್ತು, ಅಧಾಯಗಳಲ್ಲಿ ಕ್ರಮಬದ್ಧತೆ, ಬರವಣಿಗೆಯಲ್ಲಿ ಸ್ಪಷ್ಟತೆ, ನಿರೂಪಣೆಯಲ್ಲಿ ಸರಳತೆ-ಈ ಗುಣಗಳಿಂದಾಗಿ ಪ್ರಸ್ತುತ ಕೃತಿ ಮಹತ್ವ ಪಡೆದಿದೆ.
ಲೇಖಕಿ ವಿಜಯಶ್ರೀ ಇಟ್ಟಣ್ಣವರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಸ್ನಾತಕೋತ್ತರ ಪದವಿ ಹಾಗೂ ಎಂ. ಫಿಲ್ ಪದವೀಧರೆ. ‘ಹದಿನೆಂಟು ಜಾತಿಗಳು’ ಅವರ ಪ್ರಕಟಿತ ಕೃತಿ. ‘ಕಂಬಳಿ ಸಾಂಸ್ಕೃತಿಕ ಅಧ್ಯಯನ’ ವಿಷಯದಡಿ ಎಂ.ಫಿಲ್. ಪ್ರಬಂಧ ಮಂಡಿಸಿದ್ದಾರೆ. ...
READ MORE