ಹಿರಿಯ ಲೇಖಕ ಹೆಚ್. ಸಿದ್ಧಲಿಂಗಯ್ಯ ಅವರು ರಚಿಸಿದ ಕೃತಿ-ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯ (ಮೂಲ ಹಾಗೂ ತಾತ್ಪರ್ಯ ಸಹಿತ). ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಹಾಗೂ ಮಧ್ಯಕಾಲೀನ ಅವಧಿಯಲ್ಲಿ ಕನ್ನಡ ಸಾಹಿತ್ಯದ ಸ್ವರೂಪವನ್ನು ವಿವರಿಸುವುದು ಕೃತಿಯ ಉದ್ದೇಶ. ಸಂಶೋಧನಾ ದೃಷ್ಟಿಯಿಂದ ಹಾಗೂ ಅಧ್ಯಯನದ ಆಳದಿಂದ ರಚಿಸಿದ ಈ ಕೃತಿಯು ಕನ್ನಡ ಸಾಹಿತ್ಯದ ಸುದೀರ್ಘ ಇತಿಹಾಸದ ಚಿತ್ರಣ ನೀಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆ ತಿಳಿಯಲೂ ಸಹ ಈ ಗ್ರಂಥವು ಉತ್ತಮ ಆಕರವಾಗಿದೆ.
ಹೆಚ್. ಸಿದ್ದಲಿಂಗಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವರು. ಅವರದ್ದು ರೈತ ಕುಟುಂಬ. ಹಳ್ಳಿಯಲ್ಲಿ ಪ್ರೌಢಶಾಲೆ ಶಿಕ್ಷಣ, ನಂತರ, ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮೈಸೂರಿನ ಮಹಾರಾಜಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿದರು. ಡಾ. ಡಿ.ಎಲ್. ನರಸಿಂಹಾಚಾರ್, ತೀ. ನಂ. ಶ್ರೀಕಂಠಯ್ಯ, ತ.ಸು. ಶಾಮರಾವ್, ಡಾ. ಎಲ್. ಬಸವರಾಜು ಮುಂತಾದ ಅದ್ವಿತೀಯ ವಿದ್ವಾಂಸರ ಮಾರ್ಗದರ್ಶನದಲ್ಲಿ ಕನ್ನಡ ಆನರ್ಸ್ ಮತ್ತು ಎಂ.ಎ. ಪದವೀಧರರು. ಮೈಸೂರು ಧರ್ಮಪ್ರಕಾಶ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಈಗ ನಿವೃತ್ತರು. ತಮ್ಮ ಸಾಹಿತ್ಯಕ ಪ್ರವೃತ್ತಿಯನ್ನು ಮುಂದುವರಿಸಿದ್ದು, ವ್ಯಾಕರಣ ಕುರಿತು 'ಸಮಗ್ರ ...
READ MORE