‘ಕಾವೇರಿ ಮಹಾತ್ಮೆ’ ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪಾದಿತ ಕೃತಿಯಾಗಿದೆ. 'ಕಾವೇರಿ ಮಾಹಾತ್ಮ' ಪ್ರಾಚ್ಯಕಾವ್ಯಮಾಲೆಯ 121ನೆಯ ಕೃತಿ. ಒಂದು ಸಾವಿರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಗ್ರಂಥ ಬೃಹತ್ತು, ಮಹತ್ತುಗಳೆರಡರಲ್ಲಿಯೂ ವಿಶಿಷ್ಟವಾಗಿದೆ; ಬಹುಶಃ ಸಂಸ್ಥೆಯ ಪ್ರಾಚ್ಯ ಕಾವ್ಯಮಾಲೆಯಡಿಯಲ್ಲಿ ಇಲ್ಲಿಯವರೆಗೆ ಪ್ರಕಟವಾಗಿರುವ ಕೃತಿಗಳಲ್ಲೆಲ್ಲ ಇದು ಬೃಹತ್ತಾದುದಾಗಿದೆ. ಕಾವ್ಯದ ಹೆಸರೇ ಹೇಳುವಂತೆ ಇದು, ಕಾವೇರಿ ನದಿಯ ಮಹಿಮಾತಿವಹಿನಗಳನ್ನು ವರ್ಣಿಸುವುದಲ್ಲದೆ, ಅದು ಜನ್ಮತಾಳುವಲ್ಲಿಂದ ತೊಡಗಿ ಸವಂದ್ರವನ್ನು ಸೇರುವವರೆಗಿನ ಜಾಡಿನಲ್ಲಿನ ಪುಣ್ಯ ಕ್ಷೇತ್ರಗಳು, ಅವುಗಳ ಸ್ಥಳ ವರ್ಣನೆ : ಸಾಂಸ್ಕೃತಿಕ ವೈಭವಗಳ ಚಿತ್ರಣವನ್ನು ನೀಡುವ ಅಮೌಲ್ಯ ಕೃತಿಯಾಗಿದೆ. ಸಂಪಾದನಾ ವಿಭಾಗದ ಮುಖ್ಯರಾದ ಡಾ. ಬೈಲಹಳ್ಳಿ ರೇವಣ್ಣ ಅವರ ನೇತೃತ್ವದಲ್ಲಿ, ಸಹಾಯಕ ನಿರ್ದೇಶಕರಾದ ಡಾ. ಎಂ. ಪಿ. ಮಂಜಪ್ಪ ಶೆಟ್ಟಿ ಅವರು ಇದನ್ನು ಉಪಯುಕ್ತ ಪ್ರಸ್ತಾವನೆ, ಅಗತ್ಯ ಅನುಬಂಧಗಳೊಂದಿಗೆ ಶಾಸ್ತ್ರೀಯವಾಗಿ ಸಂಪಾದಿಸಿ ಕೊಟ್ಟಿದ್ದಾರೆ.
©2024 Book Brahma Private Limited.