ಡಾ. ನಾಗ ಎಚ್. ಹುಬ್ಳಿ ಅವರ ‘ಆದಿವಾಸಿ ಸಂಸ್ಕೃತಿ’ ಕೃತಿಗೆ ಡಾ. ಸ. ಚಿ. ರಮೇಶ ಅವರ ಬೆನ್ನುಡಿ ಬರಹವಿದೆ: ಕೃತಿಯ ಕುರಿತು ಬರೆಯುತ್ತಾ 'ಕಾಡು' ಆದಿವಾಸಿಗಳ ಸಂಸ್ಕೃತಿ ಬೇರು. ಆದರೆ ಕಾಡನ್ನು ಪ್ರೀತಿಸುತ್ತಲೇ ನಾಡನ್ನು ಪ್ರೀತಿಸಿದವರು ಆದಿವಾಸಿಗಳು ಎಂಬುದನ್ನು ನಾಗ ಹೆಚ್. ಹುಬ್ಬಿ ಅವರು ಈ ಕೃತಿಯಲ್ಲಿ ವರ್ಣಿಸಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಛತ್ತೀಸಗಡ, ಉತ್ತರಪ್ರದೇಶ, ಒಡಿಸ್ಸಾ, ಅಂಡಮಾನ್-ನಿಕೋಬಾರ್, ಝಾರ್ಖಂಡ್ ಪ್ರದೇಶಗಳನ್ನು ಸುತ್ತಾಡಿ ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಆದಿವಾಸಿಗಳ ಜೀವನ ಶೈಲಿ, ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಸಂಸ್ಕೃತಿಯನ್ನು ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ. ಈ ಹೊತ್ತು ಉಪೇಕ್ಷಿತ ಕ್ಷೇತ್ರಗಳ ಕಡೆಗೆ ನಮ್ಮ ಅಧ್ಯಯನಕಾರರು ಗಮನಹರಿಸುತ್ತಿದ್ದಾರೆ. ಅಂಥ ಉಪೇಕ್ಷಿತ ಸಮುದಾಯವಾದ ಆದಿವಾಸಿಗಳ ಸಾಂಸ್ಕೃತಿಕ ಚರಿತ್ರೆಗೆ ಹೊಸ ಸೇರ್ಪಡೆಯಾಗಿ ಈ ಕೃತಿಯನ್ನು ರಚಿಸಿದ ನಾಗ ಎಚ್. ಹುಬ್ಳಿ ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ ಎಂದಿದ್ದಾರೆ.
©2024 Book Brahma Private Limited.