ಡಾ.ಸತ್ಯಮಂಗಲ ಮಹಾದೇವ ಅವರ ಕೃತಿ ಕಂಗಳ ಬೆಳಕು, ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ: ತೌಲನಿಕ ಅಧ್ಯಯನ. ಈ ಕೃತಿಗೆ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
’ ಡಾ. ಸತ್ಯಮಂಗಲ ಮಹಾದೇವ ಇವರ ಕಂಗಳ ಬೆಳಕು ಒಂದು ಅತ್ಯಪೂರ್ವ ವಿಶ್ಲೇಷಣಾತ್ಮಕ ಕೃತಿ. ಬೇಂದ್ರೆ ಮತ್ತು ಮಧುರ ಚೆನ್ನರ ಕಾವ್ಯಗಳಲ್ಲಿ ಅನುಭಾವದ ನೆಲೆಗಳ ಸ್ವರೂಪವನ್ನು ಈ ಕೃತಿಯು ಪರಿಶೋಧಿಸುತ್ತದೆ. ಡಾ. ಸತ್ಯಮಂಗಲ ಮಹಾದೇವ ನಮ್ಮ ನಡುವಿನ ಸೂಕ್ಷ್ಮ ಸಂವೇದಿ ಕಾವ್ಯತತ್ವಜ್ಞ. ಹೀಗಾಗಿ ಅವರು ಇಲ್ಲಿ ನಡೆಸಿರುವ ತುಲನಾತ್ಮಕ ಅಧ್ಯಯನ ಚೇತೋಹಾರಿಯಾಗಿದೆ. ಈ ವಿದ್ವತ್ ಮಹಾಪ್ರಬಂಧದಲ್ಲಿ ಅನುಭಾವದ ತಾತ್ತ್ವಿಕ ವಿಶ್ಲೇಷಣೆ ಇರುವಂತೆ, ಅನ್ವಯಿಕ ಸಂವಿಶ್ಲೇಷಣೆಯೂ ಉಂಟು. ಬೇಂದ್ರೆ ಮತ್ತು ಮಧುರಚೆನ್ನರ ಕವಿತೆಗಳಲ್ಲಿ ಹುದುಗಿರುವ ಅನುಭಾವದ ಆನ್ವಯಿಕತೆಯನ್ನೂ ತಾತ್ತ್ವಿಕತೆಯನ್ನೂ ಸತ್ಯಮಂಗಲ ಮಹಾದೇವ ಸೂಕ್ಷ್ಮವಾಗಿ ಶೋಧಿಸಿ ಸಂವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಪ್ರಾಚ್ಯ ಹಾಗೂ ಪಾಶ್ಚಾತ್ಯ ತತ್ತ್ವಜ್ಞಾನದ ಖನಿಗಳನ್ನು ಕುರಿತೇಟಿನಂತೆ ಮಹಾದೇವ ಇಲ್ಲಿ ಸೆರೆ ಹಿಡಿದಿದ್ದಾರೆ. ಇದೊಮದು ಅನುಭಾವ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯೆಂದೇ ನನ್ನ ನಿಶ್ಚಿತ ನಂಬುಗೆ ಎಂದು ಮಲ್ಲೇಪುರಂ ಜಿ ವೆಂಕಟೇಶ್ ಹೇಳಿದ್ದಾರೆ.
©2024 Book Brahma Private Limited.