ಭಾರತದ ಪ್ರಚಲಿತ ಆರ್ಥಿಕ ಸಮಸ್ಯೆ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 105

₹ 150.00




Year of Publication: 1987
Published by: ಪ್ರಸಾರಾಂಗ ಕುವೆಂಪು ವಿಶ್ವವಿದ್ಯಾಲಯ
Address: ಮೈಸೂರು ವಿಶ್ವವಿದ್ಯಾನಿಲಯ

Synopsys

`ಭಾರತದ ಪ್ರಚಲಿತ ಆರ್ಥಿಕ ಸಮಸ್ಯೆ’ ಕೆ.ವಿ. ಪುಟ್ಟಪ್ಪ ಅವರ ಪ್ರಧಾನ ಸಂಪಾದಕತ್ವದ ಕೃತಿಯಾಗಿದ್ದು, ಸಂಪಾದಕರಾಗಿ ಎಚ್.ಆರ್. ಕೃಷ್ಣಯ್ಯಗೌಡ ಅವರು ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭಾರತದಲ್ಲಿ ವೇಗ ಗತಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಆರ್ಥಿಕಾಭಿವೃದ್ಧಿಯ ಎಲ್ಲಾ ಫಲಗಳನ್ನು ಧ್ವಂಸ ಮಾಡುತ್ತಿದೆ.” ಸಂಖ್ಯೆಯು ರಭಸವಾಗಿ, ಎಡೆಬಿಡದೆ ಏರುತ್ತಿರುವ ಸನ್ನಿವೇಶಗಳಲ್ಲಿ ಆರ್ಥಿಕ ಪ್ರಗತಿಗೆ ಕಾರ್ಯಕ್ರಮ ಕೈಗೊಳ್ಳುವುದೆಂದರೆ ನಿರಂತರವಾಗಿ ಪ್ರವಾಹಮಯ ವಾಗಿರುವ ಪ್ರದೇಶದಲ್ಲಿ ಮನೆಯನ್ನು ನಿರ್ಮಿಸಲು ಅಸಾಫಲ್ಯವಾಗಿ ಪ್ರಯತ್ನಿಸಿದಂತೆಯೇ ಸರಿ. ಭಾರತದಲ್ಲಿ ನಾವು ಇಂದು ಕಾಣುತ್ತಿರುವುದು ಇದೇ ಪರಿಸ್ಥಿತಿಯನ್ನು” ಈ ಹೇಳಿಕೆಗಳು ನಮ್ಮ ಜನಸಂಖ್ಯಾ ಸಮಸ್ಯೆಯ ಪ್ರಸ್ತುತ ಸ್ವರೂಪ ಮತ್ತು ಅದರಿಂದಾಗುತ್ತಿರುವ ಅನರ್ಥಗಳನ್ನು ಪ್ರತಿ ಬಿಂಬಿಸುವಲ್ಲಿ ಪರಿಣಾಮ ಕಾರಿ ಯಾಗುವುದರಲ್ಲಿ ಸಂದೇಹವಿಲ್ಲ. 1981 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ 68.4 ಕೋಟಿ, ಇಂದು (1987) ಅದು 77 ಕೋಟಿಗಳಷ್ಟಾಗಿದೆ. ಆದು ವರ್ಷಂಪ್ರತಿ ಸರಾಸರಿ ಶೇ. 2.5 ರ ದರದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 21 ದಶಲಕ್ಷ ಜನನಗಳಾಗುತ್ತಿವೆ. ಮತ್ತು 8 ದಶಲಕ್ಷ ಮರಣಗಳು ಸಂಭವಿಸುತ್ತಿವೆ ಎಂದು ಅಂದಾಜು, ಅಂದರೆ ನಿವ್ವಳವಾಗಿ ಜನಸಂಖ್ಯೆ ವರ್ಷ ಒಂದಕ್ಕೆ 13 ದಶಲಕ್ಷ ಅಥವಾ 1.3 ಕೋಟಿ ಹೆಚ್ಚುತ್ತಿದೆ. ಇದು, ಅಂದರೆ ಭಾರತದಲ್ಲಿ ಒಂದು ವರ್ಷದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ಭಾರತದ ಜನಸಂಖ್ಯೆಯು ಆಮೆರಿಕ, ರಷ್ಯಾ ಮತ್ತು ಜಪಾನ್ ಈ ಮೂರು ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಜಾಸ್ತಿಯಿದೆ. 

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books