ಕಾವ್ಯ ಗುಣ ಲಕ್ಷಣಗಳನ್ನು ತುಂಬಾ ವಿಸ್ತಾರವಾಗಿ ಚರ್ಚಿಸಿದ ಕೃತಿ -ಕ್ಷೇಮೇಂದ್ರನ ಕನ್ನಡ ಔಚಿತ್ಯ ವಿಚಾರ ಚರ್ಚೆ. ಡಾ. ಕೆ. ಕೃಷ್ಣಮೂರ್ತಿ ಅವರು ಈ ಕೃತಿಯನ್ನು ರಚಿಸುವ ಮೂಲಕ ತಮ್ಮ ವಿದ್ವತ್ತಿನ ಪರಿಚಯ ಮಾಡಿದ್ದಾರೆ. ಕವಿ ಕ್ಷೇಮೇಂದ್ರನ ಕವಿ ಕಂಠಾಭರಣ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಲೇಖಕರು, ಇದೇ ಕವಿಯ ಕನ್ನಡ ಔಚಿತ್ಯದ ವಿಚಾರವನ್ನೂ ಚರ್ಚಿಸುವಂತೆ ಮಾಡಿದ್ದಾರೆ. ವಸ್ತು-ವಿವೇಚನೆ ವೈಶಿಷ್ಟ್ಯತೆಯು ಈ ಕೃತಿಯು ಹೆಗ್ಗಳಿಕೆ.
ಕಾವ್ಯದ ಗುಣ-ಲಕ್ಷಣ ಕುರಿತಂತೆ ಕ್ಷೇಮೇಂದ್ರನು ಚರ್ಚಿಸಿದಷ್ಟು ಬೇರೆ ಯಾವ ಸನಾತನ ಕವಿಯೂ ಮಾಡಿಲ್ಲ ಎಂಬುದು ಲೇಖಕರ ಅಭಿಪ್ರಾಯ. ವರ್ಣ, ಶಬ್ದ, ಗುಣ, ವೃತ್ತಿ, ಅಲಂಕಾರ, ರಸ, ಹೀಗೆ ಎಲ್ಲದಕ್ಕೂ ಔಚಿತ್ಯಪೂರ್ಣತೆ ಇದೆ. ಇದನ್ನು ತಿಳೀದು ಬಳಸಿದರೆ ಮಾತ್ರ ಕಾವ್ಯದ ಅರ್ಥ ಹೆಚ್ಚುತ್ತದೆ ಎಂದು ಖಚಿತವಾಗಿ ಹೇಳುವುದು-ಈ ಕವಿಯ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಪಾರ್ವತಿ-ಪರಮೇಶ್ವರರ ರತಿಕೇಲಿ ಪ್ರಸಂಗವು ಕೆಲ ಅನೌಚಿತ್ಯಗಳ ಫಲವಾಗಿ ಹೇಗೆ ಕಳೆಗುಂದಿದೆ ಎಂಬುದನ್ನು ಕಾಳಿದಾಸನ ಸಾಹಿತ್ಯವನ್ನು ಈ ಕವಿ ತೋರುತ್ತಾನೆ. ಹೀಗೆ ನಿತ್ಯ ಜೀವನದಲ್ಲಿ ಔಚಿತ್ಯಪ್ರಜ್ಞೆ ಇರಬೇಕು ಎಂಬುದನ್ನೂ ಎಚ್ಚರಿಸುತ್ತಾನೆ. ಬೆಂಕಿಯಲ್ಲಿ ಬೇಯುತ್ತಲೇ ಶುದ್ಧವಾಗುವ ಚಿನ್ನದಂತೆ ಔಚಿತ್ಯ ಪ್ರಜ್ಞೆ ಮೆರೆಯುತ್ತಿರಬೇಕು ಎಂಬುದು ಕ್ಷೇಮೇಂದ್ರನ ಒಟ್ಟು ಅಭಿಪ್ರಾಯವಿದ್ದು, ಲೇಖಕರು ಸಮರ್ಥವಾಗಿ ಕನ್ನಡೀಕರಿಸಿದ್ದಾರೆ.
©2024 Book Brahma Private Limited.