‘ನಂಬಿಯಣ್ಣ: ಒಂದು ಅಧ್ಯಯನ’ ಎಂಬುದು ಸಾಹಿತಿ-ಲೇಖಕ ಡಾ. ಎಸ್. ವಿದ್ಯಾಂಶಕರ ಅವರು ರಚಿಸಿದ ಸಂಶೋಧನೆ ಅಧ್ಯಯನ ಯೋಗ್ಯ ಕೃತಿ. ಈತನು ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತವಾದ ಒಟ್ಟು 63 ಶಿವಭಕ್ತರಲ್ಲಿ ಒಬ್ಬ. ಸೌಂದರನಂಬಿ, ಸುಂದರಮೂರ್ತಿ, ತಿರುನಾವಲೂರರ್ ಮುಂತಾದ ಪರ್ಯಾಯ ನಾಮವಳಿಗಳಿಂದ ಈತ ಪ್ರಖ್ಯಾತನಾಗಿದ್ದಾನೆ. ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುನಾವಲೂರಿನವನು. ಕ್ರಿ.ಶ. 840ರಿಂದ 865 ರಲ್ಲಿ ಜೀವಿಸಿದ್ದನೆಂದು ಹೇಳಲಾಗುತ್ತಿದೆ. ಶಿವದೇವಾಲಯಗಳಿಗೆ ಭೇಟಿ ನೀಡಿ ಶಿವಸ್ತೋತ್ರಗಳನ್ನು ಹಾಡುವುದು ಈತನ ಕಾಯಕ.
©2024 Book Brahma Private Limited.