ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ

Author : ಎಚ್.ಜಿ. ಶ್ರೀಧರ

Pages 378

₹ 180.00




Year of Publication: 2002
Published by: ಶಿವರಾಮ ಕಾರಂತ ಅಧ್ಯಯನ ಕೇಂದ್ರ
Address: ವಿವೇಕಾನಂದ ಕಾಲೇಜು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ- 574203

Synopsys

‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’ ಎಚ್.ಜಿ. ಶ್ರೀಧರ ಅವರು ಪಿಎಚ್.ಡಿ ಪದವಿಗಾಗಿ ರಚಿಸಿದ ಮಹಾಪ್ರಬಂಧ. ಎಂಟು ಅಧ್ಯಾಯಗಳ ಇಲ್ಲಿಯ ವಸ್ತು ವ್ಯಾಪ್ತಿಯಲ್ಲಿ ಕರ್ನಾಟಕದ ರಾಜಕೀಯ ಸಂದರ್ಭ ವಿಶೇಷಗಳಲ್ಲಿ ಕಂಡುಬರುವ ಯುದ್ಧ ವಿಮಾನಗಳ ವಿವಿಧ ಮುಖಗಳು, ಸಂಧಿ ವಿಗ್ರಹಗಳ ಸ್ವರೂಪ, ಚತುರಂಗಬಲ, ವ್ಯೂಹರಚನೆ, ಕೋಟೆಕೊತ್ತಲಗಳು, ಭಾರವಾಹಕಗಳು, ಆಯುಧಗಳು ಇವುಗಳ ವಿಚಾರವಾದ ವಿಸ್ತೃತ ಭೂಮಿಕೆಯೊಂದಿಗೆ ಚೆನ್ನಾಗಿ ಪ್ರಕಟಗೊಂಡಿವೆ.

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books