ನಾಗನೂರ ಶ್ರೀ ರುದ್ರಾಕ್ಷಿಮಠ: ಒಂದು ಅಧ್ಯಯನ

Author : ಎಫ್. ಜಿ. ಜಲರಡ್ಡಿ

Pages 96

₹ 40.00




Year of Publication: 1997
Published by: ಲಿಂಗಾಯತ ಅಧ್ಯಾಯನ ಸಂಸ್ಥೆ
Address: ಲಿಂಗಾಯತ ಅಧ್ಯಾಯನ ಸಂಸ್ಥೆ ವಿರಕ್ತ ಮಠ ದೇಶನೂರ

Synopsys

'ನಾಗನೂರ ಶ್ರೀ ರುದ್ರಾ ಮಠ: ಒಂದು ಅಧ್ಯಯನ ಕೃತಿಗೆ ಧಾರವಾಡ ಕನ್ನಡ ಅಧ್ಯಯನ ಪೀಠದ ಪ್ರವಾಚಕರಾದ ಡಾ.ಎಸ್.ಎಲ್. ಸಣ್ಣೆಲ್ಲಪ್ಪನರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 'ಈ ಗ್ರಂಥ ಶ್ರೀ ಎಫ್.ಜಿ. ಜಲರಡ್ಡಿಯವರು ನನ್ನ ಮಾರ್ಗದರ್ಶನದಲ್ಲಿ, ಎಫ್, ಪರಗಾಗಿ ಬರೆದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಸಂಪ್ರಬಂಧ. ನಮ್ಮ ನಾಡಿನ ಜನತೆಯ ಶ್ರೇಯೋಭಿವೃದ್ಧಿಗಾಗಿ ಯಾವ ಸದ್ದು ಗದ್ದಲವಿಲ್ಲದೆ ತ್ರಿಕರಣಪೂರ್ವಕವಾಗಿ ಶ್ರಮಿಸಿದ ಲಿಂ. ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ ಬಹುಮುಖ ಬೃಹತ್ ಸಾಧನೆಯನ್ನು ಅವಲೋಕಿಸಿ ಅವರ ಕಾರ್ಯಕ್ಷೇತ್ರದ ಮೂಲಸ್ಥಳವಾದ ನಾಗನೂರ (ತಾ. ಬೈಲಹೊಂಗಲ, ಜಿ. ಬೆಳಗಾವ) ಶ್ರೀ ರುದ್ರಾಕ್ಷಿ ಮಠವನ್ನೇ ಕೇಂದ್ರವಾಗಿಟ್ಟುಕೊಂಡು ಕೈಕೊಂಡ ಅಧ್ಯಯನ ಈ ಸಂಪ್ರಬಂಧ.

ರಾಜಸಿಂಹಾಸನ, ಧರ್ಮಪೀಠಗಳ ಸಂಕೇತಗಳಾದ ಕಿರೀಟಗಳು ಸಾಮಾನ್ಯವಾಗಿ ಚಿನ್ನ ಬೆಳ್ಳಿ, ವಜ್ರಗಳಿಂದ ಇರುವದುಂಟು. ಆದರೆ ನಾಗನೂರ ಮಠಕ್ಕೆ ರುದ್ರಾಕ್ಷಿ ಮಠ ಎಂದು ಹೆಸರು ಬರಲು ಕಾರಣವಾಗಿ ಈಗ ಸಹ ಮಠದಲ್ಲಿ ಪೂಜೆಗೊಳ್ಳುತ್ತಿರುವ ರುದ್ರಾಕ್ಷಿ ಕಿರೀಟ ವಿಶೇಷವಾದುದು. ಈ ವಿಷಯ ನನ್ನನ್ನು ಆಕರ್ಷಿಸಿದಂತೆ ಗಮನ ಸೆಳೆದ ಇನ್ನೊಂದು ಅಂಶವೆಂದರೆ ಈ ಮಠದ ಸ್ಥಾಪನಾಚಾರ್ಯರು. ಯಾವುದೇ ಮಠದ ಮೂಲಕರ್ತೃ ಒಬ್ಬರೆ ಇರುವುದು ಸಾಮಾನ್ಯ ಸಂಗತಿ. ಆದರೆ ವಿಶೇಷ ಎನ್ನುವಂತೆ ಕ್ರಿ. ಶ. ಸುಮಾರು 1830ರಲ್ಲಿ ಸ್ಥಾಪಿತವಾಗಿರುವ ಈ ಮಠದ ಮೂಲಕರ್ತೃಗಳು ಅಲ್ಲಮಪ್ರಭು ಮತ್ತು ಸಿದ್ಧರಾಮಸ್ವಾಮಿ ಎಂಬ ಇರ್ವರು ತಪಸ್ವಿಗಳು.

ಮಾನವನ ಏಳ್ಗೆಗೆ ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಎಲ್ಲರಿಗೂ ಸಮನಾಗಿ ನೀಡಿ ಸಮಾಜಕ್ಕಾಗಿ ಹಗಲಿರುಳು ಪರಿಶ್ರಮಿಸಿದ ಪೂಜ್ಯ ಶ್ರೀ ಡಾ. ಶಿವಬಸವ ಮಹಾಸ್ವಾಮಿಗಳವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕೊಡುಗೆ ಚಿರಸ್ಮರಣೀಯ. ಇಂತಹ ದಿವ್ಯಚೇತನ ಹಾಗೂ ಮೂಲ ಮಠದ ಬಗ್ಗೆ ಸಂಶೋಧನ ವಿದ್ಯಾರ್ಥಿ ಶ್ರೀ ಜಲರಡ್ಡಿ ಯವರು ತುಂಬಾ ನಿಷ್ಠೆಯಿಂದ ಕ್ಷೇತ್ರಕಾರ್ಯ ಮಾಡಿ, ಅನುಭವಿಕರನ್ನು ಸಂದರ್ಶಿಸಿ ವ್ಯವಸ್ಥಿತ ರೂಪದಲ್ಲಿ ಪ್ರಬಂಧವನ್ನು ಸಿದ್ಧಗೊಳಿಸಿದ್ದಾರೆ. ಇಂತಹ ಅಧ್ಯಯನಗಳು ಅಧಿಕ ವಾಗಿ ನಡೆದು ಪ್ರಕಟವಾದಲ್ಲಿ ನಾಡಿನ ಇತಿಹಾಸವನ್ನು ಅರಿಯುವಲ್ಲಿ ಅತ್ಯಂತ ಸಹಾಯಗುತ್ತದೆ ಎಂದಿದ್ದಾರೆ.

About the Author

ಎಫ್. ಜಿ. ಜಲರಡ್ಡಿ

ಎಫ್. ಜಿ. ಜಲರಡ್ಡಿ ಮೂಲತಃ ಧಾರವಾಡದವರು. ...

READ MORE

Related Books