ಹಂಪ ನಾಗರಾಯ್ಯ ಅವರ ಕೃತಿ ʻಪ್ರಾಕೃತ ಕಥಾ ಸಾಹಿತ್ಯ: ಆಕೃತಿ-ಆಶಯ-ಆಯಾಮʼ. ಪ್ರಸ್ತುತ ಕೃತಿ ಕನ್ನಡದಲ್ಲಿ ಜೈನ ಸಾಹಿತ್ಯದ ಹುಟ್ಟು ಬೆಳವಣಿಗೆಗೆ ಪ್ರಾಕೃತ ಕಥಾ ಸಾಹಿತ್ಯ ನೀಡಿದ ಕೊಡುಗೆಗಳು ಏನು ಹಾಗೂ ಒಂದು ನೆಲದಿಂದ ಇನ್ನೊಂದು ಭಾಷೆಗೆ ಕಥೆಗಳು ಸಂಚಾರಗೊಂಡು ರೂಪಾಂತರಗೊಂಡ ವಿವರಗಳ ಮೂಲಕ ಸಂಶೋಧನಾತ್ಮಕವಾಗಿ ವಿವರಿಸುತ್ತದೆ. ಗ್ರೀಕ್ ಚಿಂತಕ ಅರಿಸ್ಟಾಟಲನ ಮೂಲದಿಂದ ಬೆಳೆದು ಬಂದ ಪಾಶ್ಚಿಮಾತ್ಯ ಪ್ರಣೀತ ಅಭಿಜಾತ ಪರಂಪರೆಯ ಅರಿವಿನಿಂದ ಮೂಡಿದ ಕನ್ನಡ ಅಭಿಜಾತ ಸಾಹಿತ್ಯ ವ್ಯಾಖ್ಯಾನಗಳನ್ನು ಪುನರ್ ಪರೀಕ್ಷಿಸುವಂತೆ ಈ ಕೃತಿ ಪ್ರೇರೇಪಿಸುತ್ತದೆ.
©2024 Book Brahma Private Limited.