‘ಸಂಶೋಧಕ ರಾಜಮಾರ್ಗ’ ಅಜಕ್ಕಳ ಗಿರೀಶ್ ಭಟ್ಟರ ಅಧ್ಯಯನ ಕೃತಿಯಾಗಿದೆ. ಇದಕ್ಕೆ ಬೆನ್ನುಡಿ ಬರಹ ಹೀಗಿದೆ: ಸಂಶೋಧನೆಯ ಬಗ್ಗೆ ಇಂಗ್ಲೀಷ್ ನಲ್ಲಿ ಹಲವಾರು, ಕನ್ನಡದಲ್ಲಿ ಹತ್ತಾರು ಪುಸ್ತಕಗಳು ಬಂದಿವೆ. ಆದರೆ ಸಂಶೋಧನೆಯ ಹೆಸರಲ್ಲಿ ಭಾರತೀಯ ಸಂಶೋಧಕರು ಮಾಡುತ್ತಿರುವ ತಪ್ಪುಗಳು. ಅವರ ಚಿಂತನದೋಷಗಳು, ಪಾರಿಭಾಷಿಕ ಪದಗಳ ತಪ್ಪು ಬಳಕೆಯಿಂದ ಆಗುತ್ತಿರುವ ಅನಾಹುತಗಳು ಇತ್ಯಾದಿಯ ಬಗ್ಗೆ "ಎಡವಲ್ಲದ" ಚಿಂತನೆಯ ಬರಹ/ಕೃತಿ ಬಂದದ್ದು ಇಲ್ಲವೆಂಬಷ್ಟು ವಿರಳ. ಡಾ. ಅಜಕ್ಕಳ ಭಟ್ಟರ "ಸಂಶೋಧಕರಾಜಮಾರ್ಗ' ಕೃತಿ ಭಾರತೀಯ ಚಿಂತನೆ/ಸಂಶೋಧನೆ/ಅಧ್ಯಯನ ಭಾರತೀಯ ಎಂದರೇನು. ಸಂಶೋಧಕರು ಪಾಶ್ಚಾತ್ಯ ಕುಣಿಕೆಗಳಿಂದ ಬಿಡಿಸಿಕೊಳ್ಳುವುದು ಹೇಗೆ ಎಂಬುದನ್ನು ಪ್ರಧಾನವಾಗಿ ಚರ್ಚಿಸುತ್ತದೆ. ಮಾನವಿಕ ವಿಷಯಗಳಲ್ಲಿ ಸಂಶೋಧನೆಗೆ ತೊಡಗುವವರಿಗೆ ಸಮಸ್ಯಾನಿರೂಪಣೆ, ಸಂಶೋಧನ ಆಕರಗಳು, ಭೂಮಿಕೆ ಸಿದ್ಧಪಡಿಸುವುದು ಮೊದಲಾದ ಎಲ್ಲ ಅತ್ಯಗತ್ಯ ಸಂಗತಿಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡುತ್ತದೆ. ಪಿಎಚ್.ಡಿ. ಸಂಶೋಧನೆಯಲ್ಲಿ ತೊಡಗಬಯಸುವವರು ಅವಶ್ಯವಾಗಿ ಓದಬೇಕಾದ ಪುಸ್ತಕ ಇದಾಗಿದೆ ಎಂದು ಹೇಳಬಹುದು.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE