"ಕನಕದಾಸರ ಅಪ್ರಕಟಿತ ಕೃತಿರತ್ನಗಳ" ಲೇಖಕ ಲಕ್ಷ್ಮೀಕಾಂತ ಪಟೇಲರ ಸಂಕಲನದ ಕೃತಿ.ಸುದೀರ್ಘ ಮೂವತ್ತು ವರ್ಷ ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ವಿಚಿತ್ರ ಭಾಷೆ, ಲಿಪಿಗಳಲ್ಲಿ ಹುದುಗಿದ್ದ ಹರಿದಾಸರ ಕೃತಿಗಳು, ಅವರ ಜೀವನದಲ್ಲಿ ಆಗಿ ಹೋದ ಘಟನೆಗಳನ್ನೊಳಗೊಂಡ ಹಸ್ತಪ್ರತಿ ಈ ಕೃತಿ. ತಾಳೆಗರಿಗಳನ್ನು ಶೋಧಿಸಿ, ಸಂಗ್ರಹಿಸಿ, ಅವುಗಳ ಶುದ್ಧಪಾಠ ಸಿದ್ಧ ಮಾಡಿದ್ದಾರೆ.ಹಾಗೆಯೇ ಕನಕದಾಸರ ವಂಶವೃಕ್ಷವನ್ನು ಕೈಪಿಯತ್ತು. ಸಮಕಾಲೀನ ಸಾಹಿತ್ಯ ಮತ್ತು ಶಾಸನಾಧಾರಿತವಾಗಿ ದಾಖಲೆಗಳನ್ನು ನೀಡುವುದರ ಮೂಲಕ ಅನೇಕ ವಿವಾದಿತ ವ್ಯಕ್ತಿಗಳಿಗೆ ಉತ್ತರವನ್ನು ನೀಡಿದ್ದಾರೆ.
ಲಕ್ಷ್ಮೀಕಾಂತ್ ಪಾಟೀಲ್ ಅವರು ಹರಿದಾಸ ಸಾಹಿತ್ಯ ಸಂಶೋಧಕ ಮತ್ತು ಗಾಯಕರಾಗಿದ್ದಾರೆ. ಎಂ.ಎ, ಎಂ. ಕಾಂ, ಎಲ್.ಎಲ್.ಎಂ ಹಾಗೂ ಕಾನೂನಿನಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದಿರುವ ಅವರು 20 ವರ್ಷಗಳ ಕಾಲ ವಕೀಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ವಚನಗಾಯನ, ಗಮಕವಾಚನ, ತತ್ವಪದ ದರ್ಶನ, ಜಾನಪದ ಮತ್ತು ಭಾವಗೀತೆಗಳ ಸುಗಮ ಸಂಗೀತ ಅವರ ಹವ್ಯಾಸವಾಗಿದೆ. ಅವರಿಗೆ ಶ್ರೀಪ್ರಸನ್ನವೆಂಕಟದಾಸ ಸಂಶೋಧನಾರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿರುತ್ತದೆ. ಕೃತಿಗಳು: ಶ್ರೀಪ್ರಸನ್ನವೆಂಕಟದಾಸಾರ್ಯಕೃತ ಶ್ರೀಲಕ್ಷ್ಮೀದೇವಿ ಅಪ್ರಕಟಿತ ಸ್ತುತಿರತ್ನಗಳು ...
READ MORE