ಮಲೆನಾಡಿನ ಸಿರಿ

Author : ರಾಜಶ್ರೀ ಕಿಶೋರ

Pages 186

₹ 200.00




Year of Publication: 2021
Published by: ಸಿ.ವಿ.ಜಿ ಪಬ್ಲಿಕೇಷನ್ಸ್‌
Address: ಸಿ.ವಿ.ಜಿ ಪಬ್ಲಿಕೇಷನ್ಸ್‌ ಬೆಂಗಳೂರು 560 058

Synopsys

ಮಲೆನಾಡಿನ ಸಿರಿ ಡಾ. ರಾಜಶ್ರೀ ಕಿಶೋರ ಅವರ ಕೃತಿಯಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ ಕುವೆಂಪು ಆವರೆಗೆ ಚಾಲನೆಯಲ್ಲಿದ್ದ 'ಕಾದಂಬರಿ' ಪ್ರಕಾರದಲ್ಲಿ ಹೊಸತನ್ನು ತಂದು ಮಹಾಕಾದಂಬಲಿ'ಯನ್ನು ಉದ್ಘಾಟಿಸಿದವರು. ಅದ್ಭುತ ಮಹಾಕಾವ್ಯದ ಅನುಭೂತಿಯನ್ನು ಕಾದಂಬರಿಯಲ್ಲೂ ತರಬಹುದೆಂದು ತೋರಿಸಿಕೊಟ್ಟವರು. ಅದರಿಂದಾಗಿಯೇ ಅವರ ಕಾನೂರು ಹೆಗ್ಗಡಿತಿ' ಮತ್ತು 'ಮಲೆಗಳಲ್ಲಿ ಮದುಮಗಳು' ಎನ್ನುವ ಎರಡೂ ಕಾದಂಬರಿಗಳು ಅಸಾಧಾರಣ ಎಂಬುದನ್ನು ಸಾಧಿಸಿ ತೋರಿಸಿದ ಪ್ರತೀಕಗಳಾಗಿವೆ: ನಿರಂತರವಾಗಿ ಚರ್ಚೆಗೆ ಒಳಗಾಗುತ್ತ ಹೊಸ ಕಾಣ್ಣಿಗೆ ಏಪುಲ ಅವಕಾಶವನ್ನೂ ಕಟ್ಟಿಸುತ್ತಿವೆ. ಏಸ್ತಾರವಾದ ಸಂಶೋಧನೆಗೆ ಒಳಗಾಗಿ ಪಿಎಚ್‌.ಡಿ. ಪದವಿಗಳನ್ನು ಪಡೆಯಲು ಕಾರಣವಾಗಿದ್ದರೂ ಮೊಗೆಯುವುದು ಇವತ್ತಿನವರೆಗೂ ನಿಂತಿಲ್ಲ. ಅಂಥವುಗಳನ್ನೆಲ್ಲ ಅಧ್ಯಯನ ಮಾಡಿರುವ ಅಧ್ಯಾಪಕಿ ಡಾ. ರಾಜಶ್ರೀ ಕಿಶೋರ 'ಮಲೆನಾಡಿನ ಸಿಲ' ಕೃತಿಯಲ್ಲಿ ಇನ್ನೂ ಮುಂದಕ್ಕೆ ಹೋಗುವ ಮತ್ತು ವಿಷ್ಟವಾದದ್ದನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. 'ಮಲೆಗಳಲ್ಲ ಮದುಮಗಳು' ಕೃತಿಯನ್ನು ಒಂದು ಸಾಂಸ್ಕೃತಿಕ ಸಂಕಥನವನ್ನಾಗಿಯೂ 'ಕಾನೂರು ಹೆಗ್ಗಡಿ'ಯನ್ನು ಅಲ್ಲಿನ ಪಾತ್ರಗಳ ಪ್ರಪಂಚದ ವೈಶಿಷ್ಟ್ಯದಿಂದಲೂ ವಿವೇಚನೆಗೊಳಪಡಿಸಿದ್ದಾರೆ. ಇವುಗಳ ತಂಡುಬರುವ ಜಾನಪದ ಹ ಮತ್ತು ವೈಚಾರಿಕ ಸಂಘರ್ಷವನ್ನು ಗುರುಸಿ, ವಿಶ್ಲೇಷಣೆಗೊಳಪಡಿಸಿರುವುದು ಕುತೂಹಲಕಾರಿಯಾಗಿರುವುದು ಮಾತ್ರವಲ್ಲದೆ ವಿಷಯಗಳನ್ನೇ ಇಟ್ಟುಕೊಂಡು ವಿಸ್ತಾರವಾದ ಅಧ್ಯಯನ ಮಾಡಬಹುದೆನ್ನುವ ಸುಳಿವುಗಳು ಕಾಣಿಸುವಂತೆ ಮಾಡಿದೆ. ಎಂದು ಡಾ. ಬೈರಮಂಗಲ ರಾಮೇಗೌಡ ಅವರು ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ರಾಜಶ್ರೀ ಕಿಶೋರ

ರಾಜಶ್ರೀ ಕಿಶೋರ ಅವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕವಿತಾಳ. ನೀಲಕಂಠಯ್ಯ ಶೆಟ್ಟಿ ಇಲ್ಲೂರು ಹಾಗೂ ಚಿತ್ರಲೇಖಾ ಇಲ್ಲೂರು ಅವರ ಪುತ್ರಿ.ಕನ್ನಡದಲ್ಲಿ ಸಾತಕೋತ್ತರ ಪದವಿ ಪೂರೈಸಿದ ಇವರು 4ನೇ ರ್‍ಯಾಂಕಿನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕ ಪಡೆದ ಹಿರಿಮೆ ಇವರಿಗಿದೆ. ರಾಯಚೂರಿನಲ್ಲಿ ಎಂ.ಫಿಲ್‌ ಪದವಿ ಪಡೆದು , ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದೇವಸೂಗೂರಿನ  ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನದ ಬಗ್ಗೆ, ಪಿಎಚ್‌.ಡಿ. ಪದವಿಯನ್ನು (2000)ದಲ್ಲಿ ಪಡೆದಿದ್ದಾರೆ. ಇವರ ಮಹಾಪ್ರಬಂಧವು ಕೃತಿರೂಪದಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಹೊಂದಿದೆ. `ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ...

READ MORE

Related Books