ಲೇಖಕ ಲಿಂಗದಹಳ್ಳಿ ಹಾಲಪ್ಪ ಅವರ ತೌಲನಿಕ ಅಧ್ಯಯನ ಕೃತಿ ʻಕನಕದಾಸರು ಮತ್ತು ಸರ್ವಜ್ಞʼ. ಕನಕದಾಸರು ಮತ್ತು ಸರ್ವಜ್ಞ ಇಬ್ಬರ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ. ಕನಕದಾಸರು ಕುರುಬರಲ್ಲಿ ಜನಿಸಿದರೂ ಕುರುಬನಾಗಿ ಮುಂದುವರಿಯಲಿಲ್ಲ, ತಾಳ, ದಂಡಿಗೆ ಹಿಡಿದು ಹರಿನಾಮ ಸಂಕೀರ್ತನೆ ಮಾಡಿ ವೈಷ್ಣವ ಮತ ಅನುಯಾಯಿಯಂತೆ ಕಂಡರೂ, ಜನಿವಾರ ಧರಿಸಿ ಬ್ರಾಹ್ಮಣನಾಗದೆ ವಿಶ್ವಬಂಧು, ದಾರ್ಶನಿಕರಾಗಿ ನಿಂತವರು. ಸರ್ವಜ್ಞ ಕೂಡಾ ಮಾನವ ನಿರ್ಮಿತ ಜಾತಿ ಸಂಬಂಧಗಳನ್ನು ಅಲ್ಲಗಳೆಯುತ್ತಾನೆ. ಇನ್ನು, ಆಹಾರ ಸಂಸ್ಕೃತಿಯನ್ನು ಕುರಿತು ಹೇಳುವ ಸಂದರ್ಭದಲ್ಲೂ ಕನಕ ದಾಸರು ಮತ್ತು ಸರ್ವಜ್ಞ ಇಬ್ಬರೂ ಕೂಡಾ ಏಕ ರೂಪದ ನಿಲುವು ತಾಳಿದವರು. ಹೀಗೆ, ಇಬ್ಬರ ವಿಚಾರಗಳನ್ನು ಗಮನಿಸಿದರೆ ಇಬ್ಬರ ಉದ್ದೇಶವೂ ಒಂದೇ ಎಂದು ತಿಳಿಯುತ್ತದೆ. ಹೀಗೆ ಹಲವು ಅಂಶಗಳನ್ನು ಲಿಂಗದಹಳ್ಳಿ ಹಾಲಪ್ಪ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಜನನ ಮತ್ತು ವ್ಯಕ್ತಿತ್ವ, ಸಾಹಿತ್ಯ- ಚಿಂತನೆಯ ಸ್ವರೂಪ, ತೌಲನಿಕ ಅಧ್ಯಯನ: ಎರಡು ಸಾಹಿತ್ಯ ಮೌಲ್ಯಗಳ ಮುಖಾಮುಖಿ, ಕನಕದಾಸರು ಮತ್ತು ಸರ್ವಜ್ಞ: ಕನ್ನಡ ಓದುಗನ ಗ್ರಹಿಕೆ, ಹಾಗೂ ಪರಮರ್ಶನ ಗ್ರಂಥಗಳು ಶೀರ್ಷಿಕೆಗಳ ಲೇಖನಗಳಿವೆ.
©2024 Book Brahma Private Limited.