ಕರ್ನಾಟಕದ ಇತಿಹಾಸ

Author : ಬಾ.ರಾ. ಗೋಪಾಲ್

Pages 400

₹ 500.00




Year of Publication: 2023
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

'ಕರ್ನಾಟಕದ ಇತಿಹಾಸ’ ಬಾ.ರಾ. ಗೋಪಾಲ್ ಅವರ ರಚನೆಯ ಐತಿಹಾಸಿಕ ಕೃತಿಯಾಗಿದೆ. ಪೂರ್ವೇತಿಹಾಸ ಕಾಲದಿಂದ ಕರ್ನಾಟಕ ಏಕೀಕರಣದವರೆವಿಗಿನ ಇತಿಹಾಸವನ್ನು ಅಣಿಯಾಗಿ ಜೋಡಿಸಿದ ಕೈಪಿಡಿ. ಪೂರ್ವೇತಿಹಾಸ ಕಾಲದಿಂದ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಕರ್ನಾಟಕ ಏಕೀಕರಣದವರೆಗೆ, ಕರ್ನಾಟಕದ ಇತಿಹಾಸವನ್ನು ಒಂದೆಡೆ ಅಣಿಯಾಗಿ ಜೋಡಿಸಿದ ಕೈಪಿಡಿ ರೂಪದ ಕೃತಿ ಇದು. ಕರ್ನಾಟಕ ಇತಿಹಾಸದ ವಿದ್ಯಾರ್ಥಿಗಳಿಗೆ ಗೊಂದಲಗಳಿಗೆ ಅವಕಾಶವಿಲ್ಲದಂತೆ, ವಿದ್ವಾಂಸರಿಗೆ ಆಕರವಾಗಬಲ್ಲ ಬಹೂಪಕಾರಿಯಾದ ಕೃತಿ.

About the Author

ಬಾ.ರಾ. ಗೋಪಾಲ್
(21 October 1930 - 16 June 1997)

ಬಾ.ರಾ.ಗೋಪಾಲ (ಡಾ. ಬಾಲಕೃಷ್ಣನ್ ರಾಜಗೋಪಾಲ) ಪ್ರಾಚ್ಯ ಸಂಶೋಧನಾ ಕ್ಷೇತ್ರದಲ್ಲಿ ಪ್ರಸಿದ್ಧರು.  ಚಿಕ್ಕಬಳ್ಳಾಪುರದಲ್ಲಿ 1930ರ ಅಕ್ಟೋಬರ್ 21 ರಂದು ಜನಿಸಿದರು. ಪ್ರಾಥಮಿಕ ಹಾಗು ಮಾಧಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಹಾಗೂ ಇಂಟರ್‍ ಮೀಡಿಯೇಟ್ ನ್ನು ತುಮಕೂರಿನಲ್ಲಿ ನಂತರ ಮೈಸೂರು ವಿ.ವಿ.ಯಿಂದ ಎಂ.ಎ. ಹಾಗೂ 1964 ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ “ಕಲ್ಯಾಣ ಚಾಲುಕ್ಯರು ಮತ್ತು ಕಲಚೂರಿಗಳು” (ಇಂಗ್ಲಿಷ್‌ನಲ್ಲಿ) ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದರು.  ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿ ಅನೇಕ ಶಾಸನಗಳನ್ನು ಪತ್ತೆ ಮಾಡಿದ್ದು ಇವರ ಹೆಗ್ಗಳಿಕೆ. 1972ರವರೆಗೆ ಧಾರವಾಡ ಕವಿವಿಯಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗ ದಲ್ಲಿ ಇತಿಹಾಸವನ್ನು ಬೋಧಿಸಿದರು. ನಂತರ, 1982ರವರೆಗೆ ಮೈಸೂರು ...

READ MORE

Related Books