‘ಚಿಕ್ಕನಾಯಕನಹಳ್ಳಿ ತಾಲ್ಲೂಕು’ 1720- 1900 ಕೃತಿಯು ಕೆ.ಆರ್. ಕಮಲೇಶ್ ಅವರ ಅಧ್ಯಯನ ಕೃತಿಯಾಗಿದೆ. ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಚಿಕ್ಕನಾಯಕನಹಳ್ಳಿಗೆ ಅಪೂರ್ವವಾದ ಸ್ಥಾನವಿದೆ. ವೇದಗಳ ಕಾಲದಿಂದಲೂ ತನ್ನ ಇರುವಿಕೆಯನ್ನು ಸ್ಥಾಪಿಸಿಕೊಂಡು, ಪುರಾಣಯುಗಕ್ಕೆ ತನ್ನನ್ನು ತೆರೆದುಕೊಂಡು, ಇತಿಹಾಸಯುಗದಲ್ಲಿ ತನ್ನ ಬೆಳವಣಿಗೆಯನ್ನು ತೋರ್ಪಡಿಸಿಕೊಂಡು, ಈ ಆಧುನಿಕಯುಗದಲ್ಲಿ ತನ್ನ ಮಹತ್ವನ್ನು ಮೆರೆಸುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳವಣಿಗೆಯ ಈ ಎಲ್ಲ ಹಂತಗಳನ್ನೂ ಡಾ. ಕೆ. ಆರ್. ಕಮಲೇಶ್ ಅವರು ಸಾಧಾರವಾಗಿ, ಮಿಮರ್ಶಾತ್ಮಕವಾಗಿ ಇಲ್ಲಿ ದಾಖಲಿಸಿದ್ದಾರೆ. ಪ್ರಸ್ತುತಗ್ರಂಥವು ಹಲವು ದೃಷ್ಟಿಕೋನಗಳಿಂದ ತನ್ನ ಮಹತ್ವನ್ನು ಗೆದ್ದುಕೊಂಡಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಐತಿಹಾಸಿಕ ವಿವರಗಳನ್ನು ಕೇಳುತ್ತೀರಾ, ಐತಿಹಾಸಿಕ ಚಿಂತನೆಗಳನ್ನು ಬಯಸುತ್ತೀರಾ, ವಿವಿಧ ಜನಾಂಗಗಳ ಅಧ್ಯಯನವನ್ನು ಇಷ್ಟಪಡುತ್ತೀರಾ, ಸಾಹಿತ್ಯ ಸಂಸದವನ್ನು ನಿರೀಕ್ಷಿಸುತ್ತೀರಾ, ಗ್ರಾಮೀಣಾಭಿವೃದ್ದಿಯ ದಿಗ್ಗರ್ಜನವಿರಬೇಕನ್ನುತ್ತೀರಾ, ಪ್ರೇಕ್ಷಣೀಯ ಸ್ಥಳಗಳ ವಿವರಗಳಿಗಾಗಿ ಹುಡುಕುತ್ತೀರಾ, ಸ್ವಾತಂತ್ಯ್ರ ಸಂಗ್ರಾಮದ ರಸನಿಮಿಷಗಳನ್ನು ಸವಿಯಬಯಸುತ್ತೀರಾ, ಜಾತ್ರೆಗಳ, ಹಬ್ಬ ಹರಿದಿನಗಳ ವಿಶೇಷತೆಗಳನ್ನು ಗಮನಿಸುತ್ತೀರಾ, ತಾಲ್ಲೂಕಿನ ಅಭಿವೃದ್ದಿಯ ಮುಂದಿನ ಗೊತ್ತುಗುರಿಗಳನ್ನು ತಿಳಿಯಬಯಸುತ್ತೀರಾ- ಎಲ್ಲವನ್ನೂ ಇಲ್ಲಿ ಕಮಲೇತರು ಸಂಪೂರ್ಣವಾಗಿ, ಸಹಜವಾದ ಶೈಲಿಯಲ್ಲಿ ಹಿಡಿದುಕೊಟ್ಟೊದ್ದಾರೆ.
©2024 Book Brahma Private Limited.