ಲೇಖಕ ಟಿ.ಎಂ. ಭಾಸ್ಕರ್ ಅವರ ಅಧ್ಯಯನ ಕೃತಿ ʻಕನಕದಾಸರು ಮತ್ತು ಬುದ್ದʼ. ಕನಕದಾಸರು ಮತ್ತು ಬುದ್ದ ಇವರಿಬ್ಬರ ಕಾಲಘಟ್ಟ ಬೇರೆ ಬೇರೆಯಾದರೂ ಇಬ್ಬರು ಜೀವಪರ ಚಿಂತಕರು. ಇಬ್ಬರೂ ಯುದ್ದ ನೀತಿಯನ್ನು ನಿರೋಧಿಸಿ, ವಿರಾಗಿಗಳಾಗಿ ಶಾಂತಿ ಸಂದೇಶವನ್ನು ಸಾರಿದವರು. ಈ ಹಿನ್ನೆಲೆಯಲ್ಲಿ ಭಾಸ್ಕರ್ ಅವರು ಕನಕದಾಸರು ಹಾಗೂ ಬುದ್ದನ ಜೀವನ, ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳನಮ್ನು ವಿಭಿನ್ನ ನೆಲೆಯಲ್ಲಿ ಅಧ್ಯಯನಮಾಡಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ಕನಕದಾಸರು ಮತ್ತು ಬುದ್ದನ ಜೀವಗಾಥೆ, ಕುಲದ ನೆಲೆಯ ಶೋಧ, ಹೇಸಿಕೆಯೊಳು ಬಿದ್ದು ಕಾಸುಗಳಿಸುವುದು ತರವಲ್ಲ, ಹೀನಮಾರ್ಗದಲಿ ನಡೆಯದೆ ದಾನ ಧರ್ಮವ ಮಾಡು, ಸ್ವಯಂ ಪ್ರಕಾಶಿತನಾಗುವುದು ಅರಿಯುವುದು, ನಿತ್ಯ ಜ್ಞಾನಿಯಾದ ಮೇಲೆ ನಿಬ್ಬಾಣವು ಪರಮಶ್ರೇಷ್ಠವಾದುದು, ಬುದ್ದ ಮತ್ತು ಕನಕದಾಸರ ಆಧ್ಯಾತ್ಮ ಚಿಂತನೆ, ಬುದ್ದ ಮತ್ತು ಕನಕದಾಸರ ದೃಷ್ಟಿಯಲ್ಲಿ ಪ್ರತಿಭಾನುಭಾವ, ಹಾಗೂ ಕನಕದಾಸರ ಕೀರ್ತನೆಗಳ ತಾತ್ವಿಕತೆ ಸೇರಿ ಒಂಭತ್ತು ಅಧ್ಯಾಯಗಳಿವೆ.
ಪ್ರೊ. ಟಿ.ಎಂ. ಭಾಸ್ಕರ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಜ್ರಖಾನ ಸಲಗರ ಗ್ರಾಮದವರು. ಧಾರವಾಡದ ಕರ್ನಾಟಕ ವಿವಿ. ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದು ನಂತರ ಅದೇ ವಿಶ್ವವಿದ್ಯಾಲಯದ ಪ್ರಭಾರಿ (2020) ಕುಲಪತಿಗಳಾಗಿದ್ದರು. ಕೃತಿಗಳು: ನನ್ನ ಮನದ ಗಜಲ್ (ಗಜಲ್ ಸಂಕಲನ) ...
READ MORE