ಕನಕದಾಸರ ವರಮೋಹನತರಂಗಿಣಿ

Author : ಎಮ್.ಆರ್. ಸತ್ಯನಾರಾಯಣ್

Pages 1420

₹ 1000.00




Year of Publication: 2019
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

ವರಮೋಹನ ತರಂಗಿಣಿಯು ಹರಹು, ಹರಿವು ಇದುವರೆಗೂ ಸುಮಾರು ಐದು ಶತಮಾನಗಳು ಗತಿಸಿದರೂ ವಿಸ್ತಾರವಾಗುತ್ತಾ ಸಾಗಿಬಂದಿವೆ ಎಂಬುದನ್ನು ಎಂ.ಆರ್. ಸತ್ಯನಾರಾಯಣ್ ಅವರ ಕನಕದಾಸರ ಮೋಹನತರಂಗಿಣಿ ವ್ಯಾಖ್ಯಾನ- ವಿಶ್ಲೇಷಣೆ ಸಂಪುಟ-3 ಕೃತಿಯು ತಿಳಿಸುತ್ತದೆ. ಕನಕಗಿರಿಯಲ್ಲಿ ಹುಟ್ಟಿ ಕೃಷ್ಣ ಸಾಗರದತ್ತ ಹರಿದ ಈ ಮೋಹನ ತರಂಗಿಣಿಯ ನಾನಾ ರಸ ತರಂಗಗಳು, ಆರ ತರಂಗಗಳನ್ನು ನೋಡುವವರಿಗೂ, ಆ ತರಂಗಗಳಲ್ಲಿ ನೆನಯಬಯಸುವವರಿಗೂ ಆ ತರಂಗಗಳನ್ನು ನೋಡುವವರಿಗೂ, ಆ ತರಂಗಗಳಲ್ಲಿ ನೆನಯಬಯಸುವವವರಿಗೂ ಆ ತರಂಗಗಳಲ್ಲಿ ವಿಹರಿಸಬಯಸುವವರಿಗೂ ಈ ಕೃತಿಯು ಬಹಳಷ್ಟು ಉಪಕಾರಿಯಾಗಿದೆ. ಕಾವ್ಯತರಂಗಿಣಿಯು ಅನೇಕರ ಪ್ರಕಾರ ಶೃಂಗಾರರಸಪೂರ್ಣ. ಈ ತರಂಗಿಣಿಯ ತರಂಗಗಳಲ್ಲಿ ಕೆಲವು ರಸಿಕರು ಅಥವಾ ಹಲವರು ಶೃಂಗಾರದ ಮೊರೆತವನ್ನು ಕೇಳಿದ್ದಾರೆ. ಈ ಅಲೆಗಳಿಂದ ಎದ್ದ ತುಂತುರುವಿನಲ್ಲಿ ಶೃಂಗಾರದ ಆರ್ದ್ರತೆಯಿಂದ ಒದ್ದೆಯಾಗಿದ್ದಾರೆ. ಕನಕದಾಸರು ವಡಿ, ಪ್ರಾಸ, ಗಣನೇಮ, ಛಂದಸ್ಸು, ವ್ಯಾಕರಣಾದಿಗಳನ್ನು ತಿಳಿಯದ ಮೂಢನೆಂದೂ, ತಾನೊಂದು ಗುಬ್ಬಿಯೆಂದೂ, ತಾನೊಂದು ಗೀಜಗವೆಂದೂ, ತಾವು ಕಟ್ಟಿದ ಈ ಗೂಡನ್ನು ಕೆಡುಹಬಾರದೆದೂ ವಿನಮ್ರಮೂರ್ತಿಯಾಗಿ ಕಾವ್ಯವನ್ನು ಆರಂಭಿಸುವ ಅವರು ಕೊನೆಯತನಕ ತಮ್ಮ ಕಾವ್ಯಪ್ರತಿಭೆಯ ತೆಪ್ಪದಲ್ಲಿ ಈ ತರಂಗಿಣಿಯನ್ನು ದಾಟಿದ್ದಾರೆ.

About the Author

ಎಮ್.ಆರ್. ಸತ್ಯನಾರಾಯಣ್

ಲೇಖಕ ಎಮ್.ಆರ್. ಸತ್ಯನಾರಾಯಣ್ ಅವರು ಮೂಲತಃ ಶಿವಮೊಗ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಿಂದ ಕನಕದಾಸರ ಕುರಿತ ಮೂರು ಸಂಪುಟಗಳ ಸಂಶೋಧನೆಯನ್ನು ಮಾಡಿರುತ್ತಾರೆ. ಕೃತಿಗಳು: ಕನಕದಾಸರ ವರಮೋಹನತರಂಗಿಣಿ ಸಂಪುಟ-1, ಕನಕದಾಸರ ವರಮೋಹನತರಂಗಿಣಿ ಸಂಪುಟ-2, ಕನಕದಾಸರ ವರಮೋಹನತರಂಗಿಣಿ ಸಂಪುಟ-3 ...

READ MORE

Related Books