‘ಕನ್ನಡ ಸಂಶೋಧನೆಯ ಒಳನೋಟಗಳು’ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಅವರ ಕೃತಿ. ಕೃತಿಯ ಕುರಿತು ತಿಳಿಸುತ್ತಾ ಆಧುನೀಕತೆಯಲ್ಲಿಂದು, ಸಂಶೋಧನೆಯ ಅಗತ್ಯವೇನು, ಸಂಶೋಧಕನಿಗಿರಬೇಕಾದ ಅರ್ಹತೆಗಳು ಯಾವುವು, ಸಂಶೋಧನೆಗೆ ಸಂಶೋಧಕ ಹೇಗೆ ಸಿದ್ಧಗೊಳ್ಳುವುದು, ಸಂಶೋಧನಾ ಸಂಸ್ಕೃತಿಯನ್ನು ಇರಿಸಿಕೊಂಡು ಪ್ರಾಮಾಣಿಕವಾಗಿ, ಕಷ್ಟಪಟ್ಟು, ಇಷ್ಟಪಟ್ಟು ಸಂಶೋಧನಾ ಪ್ರಬಂಧವನ್ನು ಬರೆಯುವುದು. ಹಾಗೆಯೇ ಸಂಶೋಧನಾ ಪಾಲಿಸಿಯನ್ನು ಮೈಗೂಡಿಸಿಕೊಂಡು , ನೈತಿಕತೆಯನ್ನು ಹೇಗೆ ಪಾಲಿಸಬೇಕು,ಸಂಶೋಧನಾ ವಿಧಿ-ವಿಧಾನಗಳನ್ನು ಬಳಸಿಕೊಂಡು, ಕಾರ್ಯ ಕ್ಷೇತ್ರವನ್ನು ಮಾಡುವುದರೊಂದಿಗೆ ಸಮಸ್ಯೆ, ವಿಶ್ಲೇಷಣೆ ಮತ್ತು ತೀರ್ಮಾನಗಳನ್ನು ನೀಡುವುದು ಹೇಗೆ, ಸಂಶೋಧನೆಯ ಬರವಣಿಗೆ ಹೇಗಿರಬೇಕು ಅದರ ಆಳ ಅಗಲಗಳನ್ನು ತಿಳಿದುಕೊಂಡು ಗುಣಾತ್ಮಕವಾಗಿ ಸಂಶೋಧನೆಯನ್ನು ಬರೆಯುವುದು ಹೇಗೆ, ಸಂಶೋಧನೆಗಾಗಿಯೇ ರೂಪಿತವಾದ ಸಂಸ್ಥೆಗಳು, ಸಂಶೋಧನಾ ಮುಖ್ಯಸ್ಥನ ವ್ಯಕ್ತಿತ್ವ ಹೇಗಿರಬೇಕು. ಸಂಶೋಧನೆಯ ಹಾದಿಯ ಅರಿವನ್ನು ಪಡೆಯುವುದು ಹೇಗೆ ಎಂಬುದನ್ನು ಆಧುನಿಕ ಕನ್ನಡ ಸಂಶೋಧನಾರ್ಥಿಗಳಿಗಾಗಿ ಸರಳವಾದ ಕೃತಿಯನ್ನು ಪ್ರೀತಿಯಿಂದ, ಕನ್ನಡ ಸಂಶೋಧನ ವಿದ್ಯಾರ್ಥಿಯಾಗಿ ಹಲವು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಸ್ವ-ಅನುಭವವನ್ನು ಮೈಗೂಡಿಸಿಕೊಂಡು, ಸಂಶೋಧನಾರ್ಥಿಗಳಿಗಾಗಿ ರಚಿಸಿರುವ ಕನ್ನಡ ಸಂಶೋಧನಾ ಒಳನೋಟಗಳು ನಮ್ಮ ನಿಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದಿದ್ದಾರೆ ಲೇಖಕ ವೆಂಕೋಬರಾವ್ ಎಂ. ಹೊಸಕೋಟೆ. ಈ ಕೃತಿ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಮಾರ್ಗದರ್ಶನವಾಗಲಿದೆ.
©2024 Book Brahma Private Limited.