‘ಕರ್ನಾಟಕ ಜನಗಣತಿ 2011’ ಕೃತಿಯು ಟಿ.ಆರ್. ಚಂದ್ರಶೇಖರ ಅವರ ಅಧ್ಯಯನ ಕೃತಿಯಾಗಿದೆ. ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ತಮ್ಮದು ಕಡಿಮೆ ಜನಸಂಖ್ಯೆಯೆಂಬ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿಮೀರಿ ಕಬಳಿಸುತ್ತಿವೆ. ಬಡರಾಷ್ಟ್ರಗಳಲ್ಲಿ ಬಂಡವಾಳ ಹೂಡಿ ಜನರನ್ನು ದುಡಿಸಿ ಸಂಪತ್ತನ್ನು ದೋಚುವ ರಾಷ್ಟ್ರಗಳು ಜನಸಂಖ್ಯಾ ಬಾಹುಳ್ಯವಿರುವ ದೇಶಗಳನ್ನು ಆಯ್ಕೆಮಾಡಿ ಶೋಷಣೆ ಮಾಡುತ್ತಿವೆ. ಜನಸಂಖ್ಯೆ ಬೆಳವಣಿಗೆ ಮತ್ತು ತತ್ಸಂಬಂಧಿತ ಸಮಸ್ಯೆಗಳ ಬೆಳವಣಿಗೆ ಏಕಕಾಲದಲ್ಲಿ ಸಮಾನಾಂತರವಾಗಿ ಸಾಗುತ್ತಿದ್ದರೆ, ಸಮಾಜ ಶಾಸ್ತ್ರಜ್ಞರು ಕೈ ಚೆಲ್ಲಿ ಕುಳಿತರೆ ಅಭಿವೃದ್ಧಿ ಸಾಧ್ಯವೇ ? ಇಂಥ ಹಲವಾರು ಪ್ರಶ್ನೆಗಳಲ್ಲಿ ಚರ್ಚಿಸಲಾಗಿದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಂಕಿಅಂಶಗಳ ಸಹಿತ ಈ ಪುಸ್ತಕದಲ್ಲಿ ನೀಡಲಾಗಿದೆ.
(ಹೊಸತು, ಜುಲೈ 2012, ಪುಸ್ತಕದ ಪರಿಚಯ)
ಕರ್ನಾಟಕ ರಾಜ್ಯದ 2011ರ ಜನಗಣತಿಯಿಂದ ಲಭ್ಯವಾದ ಮಾಹಿತಿ ನಮ್ಮನ್ನು ಹಲವು ಬಗೆಯಲ್ಲಿ ಯೋಚಿಸುವಂತೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿನ ಸಫಲತೆ- ವಿಫಲತೆಗಳನ್ನು ಜನಸಂಖ್ಯೆಯೆಂಬ ಮಾನದಂಡದಿಂದ ಅಳೆದಾಗ ನಾವು ಎಡವಿದ್ದು ಸ್ಪಷ್ಟವಾಗುತ್ತದೆ. ಜನಸಂಖ್ಯಾ ಸ್ಫೋಟ ಮಾರಕವೆಂದು ಚಿತ್ರಿಸುತ್ತ ಕುಟುಂಬಯೋಜನೆ ಕಡ್ಡಾಯ ಮಾಡಿದರೆ ಸಾಧನೆಯೆಂದು ತಿಳಿದದ್ದೇ ತಪ್ಪು. ಜನಸಂಖ್ಯಾ ಬೆಳವಣಿಗೆಯನ್ನು ಗೇಲಿಮಾಡದೆ ಜನರ ಶಕ್ತಿಯನ್ನು ದೇಶದ ಅಭಿವೃದ್ಧಿಯ ಪಥದಲ್ಲಿ, ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು ನಮ್ಮಲ್ಲಿ ಆಹಾರದ ಕೊರತೆಯಿದ್ದು ಉದ್ಯೋಗದ ಖಾತರಿ ಇಲ್ಲದಿರುವುದರಿಂದ 'ಚಿಕ್ಕ ಕುಟುಂಬ'ದ ವ್ಯಾಖ್ಯೆ ಆಪ್ಯಾಯಮಾನವಾಗಿತ್ತು ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ತಮ್ಮದು ಕಡಿಮೆ ಜನಸಂಖ್ಯೆಯೆಂಬ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿಮೀರಿ ಕಬಳಿಸುತ್ತಿವೆ. ಬಡರಾಷ್ಟ್ರ ಗಳಲ್ಲಿ ಬಂಡವಾಳ ಹೂಡಿ ಜನರನ್ನು ದುಡಿಸಿ ಸಂಪತ್ತನ್ನು ದೋಚುವ ರಾಷ್ಟ್ರಗಳು ಜನಸಂಖ್ಯಾ ಬಾಹುಳ್ಯವಿರುವ ದೇಶಗಳನ್ನು ಆಯ್ಕೆಮಾಡಿ ಶೋಷಣೆ ಮಾಡುತ್ತಿವೆ. ಜನಸಂಖ್ಯೆ ಬೆಳವಣಿಗೆ ಮತ್ತು ತತ್ಸಂಬಂಧಿತ ಸಮಸ್ಯೆಗಳ ಬೆಳವಣಿಗೆ ಏಕಕಾಲದಲ್ಲಿ ಸಮಾನಾಂತರವಾಗಿ ಸಾಗುತ್ತಿದ್ದರೆ, ಸಮಾಜ ಶಾಸ್ತ್ರಜ್ಞರು ಕೈ ಚೆಲ್ಲಿ ಕುಳಿತರೆ ಅಭಿವೃದ್ಧಿ ಸಾಧ್ಯವೇ ? ಇಂಥ ಹಲವಾರು ಪ್ರಶ್ನೆಗಳಲ್ಲಿ ಚರ್ಚಿಸಲಾಗಿದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಂಕಿಅಂಶಗಳ ಸಹಿತ ಈ ಪುಸ್ತಕದಲ್ಲಿ ನೀಡಲಾಗಿದೆ.
©2024 Book Brahma Private Limited.