ಮ್ಯಾಸ ಕಂಪಳದ ಚಹರೆ-ಲೇಖಕ ಎಂ.ಡಿ. ಪ್ರಹ್ಲಾದ ಅವರು ಬರೆದ ಹತ್ತು ಸಂಶೋಧನಾ ಬರಹಗಳ ಸಂಗ್ರಹ ಕೃತಿ. ಮ್ಯಾಸಬೇಡರ ಬುಡಕಟ್ಟು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಈ ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಅಮರೇಶ ಯತಗಲ್ ‘ಮ್ಯಾಸ ಬೇಡರ ಸಾಂಸ್ಕೃತಿಕ ವೀರರ ಪವಿತ್ರ ವಾದ್ಯ ಢಗಮುವಿನ ತಯಾರಿಕೆ, ಪಾವಿತ್ಯ್ರತೆ ಹಾಗೂ ಅವರ ಕಥನಗಳಲ್ಲಿಯ ಸಂಘರ್ಷದ ನೆಲೆಗಳನ್ನು ಗುರುತಿಸುವುದರೊಂದಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಸೈದ್ಧಾಂತಿಕವಾಗಿ ನಿರೂಪಿಸಿದ್ದಾರೆ. ಬುಟಗಲೊರು ಬೆಡಗಿನ ಆರಾಧ್ಯ ದೈವವಾದ ಕೊಳಗಲು ಬೊಮ್ಮನಾಯಕನ ಕಥನಗಳ ಸಾಂಸ್ಕೃತಿಕ ಚಹರೆಗಳು ಮನೋಜ್ಞವಾಗಿವೆ. ವ್ಯಾಪಕ ಕ್ಷೇತ್ರ ಕಾರ್ಯದ ಮೂಲಕ ಮ್ಯಾಸಬೇಡರ ಪರಿಸರದಲ್ಲಿ ಇಂದಿಗೂ ಜೀವಂತವಾಗಿರುವ ಕಂಪಳದೇವರು, ಕಿಲಾರಿಗಳು ಮತ್ತು ದೇವರೆತ್ತುಗಳ ಆಚರಣೆಗಳು, ಸಾಂಸ್ಕೃತಿಕ ವೀರರ ನಂತರದ ಸ್ಥಾನಗಳನ್ನು ಪಡೆದು, ದೇವರ ಸ್ಥಾವನ್ನು ಕಂಡುಕೊಂಡ ಬಗೆ ಬಹು ಕುತೂಹಲಕಾರಿಯಾಗಿದೆ. ಮ್ಯಾಸಬೇಡರ ಅಧಿಕೃತ ಸಂಶೋಧನೆಯ ಸಾಲಿಗೆ ಈ ಕೃತಿ ಸಾಂಸ್ಕೃತಿಕ ಕಥನವಾಗಿ ನಿಲ್ಲುವ ತಲಸ್ಪರ್ಶಿ ಅಧ್ಯಯನವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.