ಖ್ಯಾತ ಜಾನಪದ ತಜ್ಞ ಡಾ. ಎಚ್.ಎಲ್. ನಾಗೇಗೌಡರು ಸ್ಥಳೀಯ ಸಂಸ್ಕೃತಿ ಮಾತ್ರಲ್ಲ ಇಡೀ ಜಾನಪದ ಸಂಸ್ಕೃತಿಯನ್ನು ತಮ್ಮ ಅಧ್ಯಯನದ ವಸ್ತುವಾಗಿಸಿದ್ದು, ಈ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಭಾರತವು ಜಾನಪದ ಸಂಸ್ಕೃತಿಯಿಂದ ಶ್ರೀಮಂತ. ವಿದೇಶಿಯರು ಸಹ ಈ ದೇಶದ ಸಂಸ್ಕೃತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರ ಅನುಭವದ ಬರಹಗಳನ್ನು ಸಂಶೋಧಿಸಿ, ಒಂದೆಡೆ ನೀಡಿರುವ ಪ್ರತ್ಯೇಕ ಸಂಪುಟಗಳನ್ನು ಸೇರಿಸಿ, (ಒಟ್ಟು 8 ಪುಸ್ತಕಗಳು) ಈ ಪುಸ್ತಕವನ್ನು ಪ್ರಕಟಿಸಲಾಗಿದೆ.
ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ. ಆನಂತರ ಮೈಸೂರು ಸಿವಿಲ್ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ...
READ MORE