ಲೇಖಕ ಶಿವಪ್ರಸಾದ್ ವೈ.ಎಸ್. ಅವರ ಸಂಶೋಧನಾ ಪ್ರಬಂಧ ಕೃತಿ ʻಕನಕ ಪುರಂದರ: ಇಹ-ಪರಗಳ ಮುಖಾಮುಖಿʼ. ಹದಿನಾರನೇ ಶತಮಾನದ ಭಕ್ತಿ ಪರಂಪರೆಯಲ್ಲಿ ಸಾಹಿತ್ಯ ವಿಚಾರಗಳ ಸಮನ್ವಯತೆಯಿಂದ ಕನಕದಾಸರು ಮತ್ತು ಪುರಂದರದಾಸರು ಎಂಬ ಎರಡು ಹೆಸರುಗಳು ಎದ್ದು ಕಾಣುತ್ತವೆ. ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಆಧ್ಯಾತ್ಮ, ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಯಾವುದೇ ಒಂದು ಜಾತಿ-ಮತ-ಪಂಥ ಪ್ರದೇಶಕ್ಕೆ ಸೀಮಿತವಾಗಿರದೆ, ವೀಶ್ವದ ಒಳಿತನ್ನು ಸದಾ ಬಯಸುತ್ತಿದ್ದ ಕನಕದಾಸರು ಹಾಗೂ ಪುರಂದರದಾಸರ ವೈಚಾರಿಕ ಹಾಗೂ ತೌಲನಿಕ ಕುರಿತ ಅಧ್ಯಯನಗಳನ್ನು ನಡೆಸಿ ಪುಸ್ತಕ ಹೊರತರಲಾಗಿದೆ. ಜೊತೆಗೆ ನೂರಕ್ಕೂ ಅಧಿಕ ಅಂಶಗಳನ್ನು ತೌಲನಿಕ ಅಧ್ಯಯನದ ದಿಕ್ಸೂಚಿಯಲ್ಲಿ ನೀಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ಹರಿದಾಸ ಸಾಹಿತ್ಯ, ಜೀವನ ಮತ್ತು ಪರಿಸರ, ತೌಲನಿಕ ಅಧ್ಯಯನ, ಕನಕ ಪುರಂದರರು ಕಂಡ ಆದರ್ಶ ಭಕ್ತರು, ಕನಕದಾಸರ ಕೃತಿಗಳ ವಿವೇಚನೆ, ದಾಸಕೂಟ-ವ್ಯಾಸಕೂಟ, ಕೀರ್ತನೆಗಳಲ್ಲಿ ಸಾಮಾಜಿಕ ತಾತ್ವಿಕ ಆಯಾಮಗಳು, ಹಾಗೂ ಸಮಕಾಲೀನ ಸಂದರ್ಭದಲ್ಲಿ ಕನಕ ಪುರಂದರರು ಸೇರಿ ಒಟ್ಟು 8 ಅಧ್ಯಯಗಳಿವೆ.
©2025 Book Brahma Private Limited.