ಡಾ. ಟಿ.ಆರ್. ಚಂದ್ರಶೇಖರ ಅವರ ಕೃತಿ-ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ-ಒಂದು ಅಧ್ಯಯನ. ಜಾತಿ ಶ್ರೇಣಿಕೃತ ವ್ಯವಸ್ಥೆಯನ್ನು ಬದಿಗೆ ಸರಿಸಿ ಭಾರತೀಯ ಸಂವಿಧಾನದಲ್ಲಿ ದಮನಿತ ವರ್ಗದ ವಿಶೇಷವಾಗಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮೀಸಲು ಹಕ್ಕು ನೀಡಲಾಗಿದೆ. ಸಂವಿಧಾನ ನಿರ್ಮಾತೃ ಡಾ. ಬಿ.ಆರ್. ಆಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಂವಿಧಾನ ರಚನೆಯಾಗುವುದಕ್ಕೂ ಮುನ್ನ ಭಾರತದಲ್ಲಿ ಮೀಸಲಾತಿ ಚಾಲ್ತಿಯಲ್ಲಿದ್ದ ಬಗೆಗಿನ ಇತಿಹಾಸ ಹಾಗೂ ಮೀಸಲಾತಿ ಕುರಿತ ಮಿಲ್ಲರ್ ಸಮಿತಿಯ ಶಿಫಾರಸುಗಳು, ಅದು ವ್ಯಕ್ತ ಮಾಡಿದ ಅಭಿಪ್ರಾಯಗಳು ಬಹುತೇಕರಿಗೆ ತಿಳಿಯದ ಮಾಹಿತಿ. ಇದನ್ನು ಲೇಖಕರು ತೌಲನಿಕವಾಗಿ ಅಧ್ಯಯನ ನಡೆಸಿದ್ದರ ಫಲವೇ ಈ ಕೃತಿ.
ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ: ಒಂದು ಅಧ್ಯಯನ ಕೃತಿಯ ವಿಮರ್ಶೆ
ಅಸಮಾನತೆ ಗರ್ಭೀಕರಿಸಿಕೊಂಡ ಭಾರತೀಯ ಸಮಾಜದಲ್ಲಿ ಮೀಸಲಾತಿ ಕೇಳುವುದು ಕೇವಲ ಮಾನವೀಯ ಅನುಕಂಪದಿಂದಲ್ಲ, ಶಾಸನಬದ್ಧ ಹಕ್ಕು ಕೂಡ ಆಗಿದೆ. ನಮ್ಮ ಸಂವಿಧಾನದ ಪ್ರಕಾರ ಸಾಮಾಜಿಕ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಶಬ್ದ ಬಳಸಲಾಗಿದೆ. ಪರ ಸೆಕ್ಯುಲರ್ ಎಂಬ ಶಬ್ದ ವ್ಯಾಖ್ಯಾನಿಸಿದಂತಿಲ್ಲ. ಅಂದರೆ ಸರಕಾರ ಧರ್ಮಾತೀತ ವಾಗಿರಬೇಕು. ಬಹುಭಾಷೆ ಹೊಂದಿದ ಭಾರತದಲ್ಲಿ ಸೆಕ್ಯುಲರ್ ಎಂಬ ಶಬ್ದ ತನ್ನ ಮೂಲ ಅರ್ಥ ಕಳೆದುಕೊಂಡಿದೆ. ಕನ್ನಡದಲ್ಲಿ “ಸರ್ವಧರ್ಮ ಸಮಭಾವ' ಎಂದು ಅರ್ಥೈಸಿಕೊಂಡೆವು. ಸಾಮಾಜಿಕ ನ್ಯಾಯದ ವಿರುದ್ಧ ದಿಕ್ಕಿನಲ್ಲಿ ನಾವು ಚಲಿಸುತ್ತಿದ್ದೇವೆ. ಅದಕ್ಕೆ ಇತ್ತೀಚೆಗೆ ಜರಗುತ್ತಿರುವ 'ಮೀಸಲಾತಿ' ಚಳುವಳಿಗಳೇ ಸಾಕ್ಷಿ. ಮಠದಲ್ಲಿರಬೇಕಾದ ಸ್ವಾಮಿಗಳು ಬೀದಿಗೆ ಬಂದಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಪ್ರಬಲ ಜಾತಿ ಗುಂಪುಗಳು ಮೀಸಲಾತಿ ಹಕ್ಕೊತ್ತಾಯಿಸಲು ಶಕ್ತಿಕೇಂದ್ರದ ಬಾಗಿಲಿಗೆ ಸರತಿಯಲ್ಲಿ ನಿಂತಿವೆ. ಆದರೆ ನಿಜವಾಗಿ ಅನ್ಯಾಯಕ್ಕೆ ಒಳಗಾದವರು ಮೌನವಾಗಿದ್ದಾರೆ. ಶಕ್ತಿ ಪ್ರದರ್ಶನ ಅಸ್ತವಾಗಿದೆ. ಮೀಸಲಾತಿ ರಾಜಕೀಯಕರಣ ಹೊಂದಿದೆ.
ಮೀಸಲಾತಿ ಸಮಸ್ಯೆಯನ್ನು ಬೇರು ಮಟ್ಟದಲ್ಲಿ ಡಾ|| ಟಿ. ಆರ್. ಚಂದ್ರಶೇಖರ “ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ” ಎಂಬ ಸಂಶೋಧನ ಪ್ರಬಂಧದಲ್ಲಿ ಈ ಸಮಸ್ಯೆಗೆ ಕನ್ನಡಿ ಹಿಡಿದಿದ್ದಾರೆ. ನವಕರ್ನಾಟಕ ಪ್ರಕಾಶನ ಸಂಸ್ಥೆ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ. ಮೈಸೂರು ಮಹಾರಾಜರು ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಒಂದು ಶತಮಾನದ ಮೊದಲೆ ಕಾರ್ಯರೂಪಕ್ಕೆ ತಂದಿರುವದು ಮೆಚ್ಚಬೇಕಾದ ವಿಷಯ.
ಈ ಪುಸ್ತಕವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಚಾತುರ್ವಣ್ಯ್ರ ವ್ಯವಸ್ಥೆಯ ವಿರುದ್ಧ ನಡೆದ ಹೋರಾಟಗಳ ವಿವರಣೆ ಇದೆ. ಎರಡನೆ ಭಾಗದಲ್ಲಿ ಮಿಲ್ಲರ್ ಸಮಿತಿ ವರದಿ ಅದರ ವಿವಿಧ ಆಯಾಮಗಳನ್ನು ಚರ್ಚಿಸಲಾಗಿದೆ. ಅನುಬಂಧದಲ್ಲಿ ಸಂಶೋಧನ ಪ್ರಬಂಧಕ್ಕೆ ಪೂರಕವಾದ ಸಂವಿಧಾನ ಜಾತಿ ಪದ್ಧತಿ ಹಾಗೂ ಅದರ ವಿವಿಧ ಮುಖಗಳನ್ನು ವಿಶ್ಲೇಷಿಸಲಾಗಿದೆ. ಇವೆಲ್ಲಕ್ಕೂ ಮುಖ್ಯವಾಗಿ ಮೌಲಿಕವಾದ ಪ್ರಸ್ತಾವನೆ ಪ್ರಾರಂಭದಲ್ಲಿದೆ.
ವಸಾಹತು ಆಡಳಿತದ ಬಗ್ಗೆ ಇರುವ ವಿಭಿನ್ನ ಧೋರಣೆಗಳಿಗೆ ಸಂಬಂಧಿಸಿದ ವಿವರಗಳಿವೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು ಮೇಲಿನ ವರ್ಣದವರು, ತಳವರ್ಗದವರು ಸ್ವಾತಂತ್ರ್ಯ ಚಳುವಳಿ ಬಗ್ಗೆ ಗಮನ ಹರಿಸಲಿಲ್ಲ. ಭಾರತದ ಎಲ್ಲ ಬದಲಾವಣೆಗೆ ಮೇಲ್ಜಾತಿಯವರೆ ಹರಿಕಾರರು ಎಂದು ಸ್ವಘೋಷಿತವಾದವಿದೆ. ಲೇಖಕರು ಕೆ. ಕೆ. ಕಲೇಕರರ ಅಭಿಪ್ರಾಯ ಹೀಗೆ ದಾಖಲಿಸಿದ್ದಾರೆ: “ಬ್ರಿಟಿಷ್ ಆಡಳಿತ ಸಮಾನತೆ ಪರವಾಗಿತ್ತು. ಪುರೋಹಿತಶಾಹಿ ಹೇರಿದ ಮೂಢನಂಬಿಕೆ ನಿರಾಕರಿಸಿತಲ್ಲದೆ ಬ್ರಾಹ್ಮಣ್ಯದ ಪ್ರಾಬಲ್ಯದ ಬಗ್ಗೆ ಒಪ್ಪಿಗೆ ಇರಲಿಲ್ಲ. ಬ್ರಿಟಿಷ್ ಆಡಳಿತ ಅಕ್ಷರ ಸಂಸ್ಕೃತಿಯ ಅವಕಾಶ ತಳಜಾತಿಗಳಿಗೆ ಒದಗಿಸಿತು. ಶೂದ್ರ ಜಾತಿಗಳು ಸ್ವಾತಂತ್ರ್ಯ ಹೋರಾಟದ ವಿರುದ್ದ ಇರಲಿಲ್ಲ. ಆದರೆ ಮೇಲಿನ ವರ್ಣಗಳಿಂದ ಅನುಭವಿಸಿದ ಅವಮಾನ, ಅನ್ಯಾಯ, ಶೋಷಣೆ ತಾರತಮ್ಯಗಳಿಂದ ಬಿಡುಗಡೆ ಪಡೆಯಬೇಕಾಗಿತ್ತು. ಅಕ್ಷರ ಸಂಸ್ಕೃತಿಯ ಗುತ್ತಿಗೆ ಪಡೆದ ಬ್ರಾಹ್ಮಣರು ಬ್ರಿಟಿಷ್ ಆಡಳಿತದಲ್ಲಿ ಅತಿ ಹೆಚ್ಚು ಸೌಲಭ್ಯ ಪಡೆದವರು. ದಾಖಲೆಗೆ ಒಳಪಡಿಸದ ಸತ್ಯವೆಂದರೆ ಈಸ್ಟ್ ಇಂಡಿಯಾ ಕಂಪನಿ ಪ್ರಾಬಲ್ಯಗೊಳ್ಳಲು ಬ್ರಾಹ್ಮಣರು ಕಾರಣರಾಗಿದ್ದರು”. ಗಣ್ಯವ್ಯಕ್ತಿಗಳೆಂದು ಗೌರವಕ್ಕೆ ಪಾತ್ರರಾದ ಸರ್ ಎಂ. ವಿಶ್ವೇಶ್ವರಯ್ಯ, ಡಿ. ವಿ. ಗುಂಡಪ್ಪ, ಎಂ. ವೆಂಕಟಕೃಷ್ಣಯ್ಯ, ಸೀತಾರಾಮಶಾಸ್ತ್ರಿ, ತಿ. ತಾ. ಶರ್ಮ ಮುಂತಾದವರು ಮಿಲ್ಲರ್ ಸಮಿತಿ ವರದಿಗೆ. ವಿರೋಧವಾಗಿದ್ದರು. ಬ್ರಾಹ್ಮಣರು ಒಳಬಾಂಧವ್ಯ ಪದ್ಧತಿ ಸ್ಥಿರೀಕರಿಸಿದಾಗ ಜಾತಿ ಗುಂಪುಗಳು ಮುಚ್ಚಿದ ಸಮೂಹವಾದವು. ಮೀಸಲಾತಿ ನೀತಿಯಿಂದ ಒಂದು ಜಾತಿ ಇನ್ನೊಂದು ಜಾತಿಯನ್ನು ದ್ವೇಷದಿಂದ ನೋಡುವ ಪರಂಪರೆ ಬೆಳೆಯಿತು. ಜಾತಿ ರಾಜಕೀಯ ಅಸ್ತ್ರವಾಗಿ ಬಳಸಲ್ಪಟ್ಟಿತು. 'ಘನತೆಯಿಂದ ಕೂಡಿದ ಬದುಕನ್ನು ಸಾಧಿಸಿಕೊಳ್ಳುವ ಸಾಧನವಾಗಿ ಮೀಸಲಾತಿ ಬೇಕು' ಎಂಬುದು ಡಾ| ಅಂಬೇಡ್ಕರರ ಆಶಯವಾಗಿತು. ಇತ್ತೀಚಿನ ಚಳುವಳಿಗಳಿಂದ ಸಂವಿಧಾನದ ಆಶಯಕ್ಕೆ ಗೋರಿ ತೋಡಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ನಡೆದ ಬ್ರಾಹ್ಮಣವಿರೋಧಿ ಚಳುವಳಿಗಳನ್ನು ಭಾಗ ಒಂದರಲ್ಲಿ ದಾಖಲಿಸಲಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರವರೆಗೆ ಜರುಗಿದ ಚಳುವಳಿಗಳನ್ನು ಬೇರೆ ಬೇರೆಯವರು ವಿಭಿನ್ನ ರೀತಿಯಲಿ ಅರ್ಥೈಸಿದ್ದಾರೆ. ಹತ್ತೊಂಬತ್ತನೆ ಶತಮಾನದ ಕೊನೆ ಹಾಗೂ ಇಪ್ಪತ್ತನೆ ಶತಮಾನದ ಪ್ರಾರಂಭದಲ್ಲಿ ಜರುಗಿದೆ.
ಪ್ರಮುಖ ಐದು ಬ್ರಾಹ್ಮಣ ವಿರೋಧಿ ಚಳುವಳಿಗಳನ್ನು ಇಲ್ಲಿ ದಾಖಲಿಸಲಾಗಿದೆ. ಇಂದು ಜರುಗುತ್ತಿರುವ ಚಳುವಳಿಗಳ ಒಳ-ಹೊರಗನು ದಾಖಲಿಸುವ ತುರ್ತು ಕೂಡ ಇದೆ.
೧) ಜ್ಯೋತಿರಾವ್ ಫುಲೆ ದಂಪತಿಗಳು ಸತ್ಯಶೋಧಕ ಸಮಾಜ' ಸಂಘಟನೆ ಮೂಲಕ ಜರುಗಿಸಿದ ಚಳುವಳಿ, ವಿಚಿತ್ರ ಎಂದರೆ ಬಾಲ ಗಂಗಾಧರ ತಿಲಕ, ವಿಷ್ಣುಶಾಸ್ತಿ - ಚಿಪಟೂಣಕರ ಮುಂತಾದವರು ಪುಲೆಯವರ ಹೋರಾಟ ವಿರೋಧಿಸಿದ್ದರು.
೨) ಕೊಲ್ಲಾಪುರ ಶಾಹು ಮಹಾರಾಜರ ಸಮಾನತೆ ಪ್ರಣಾಳಿಕೆ,
೩) ಕೇರಳದ ನಾರಾಯಣಗುರುಗಳ ಹಿಂದುಳಿದ ವರ್ಗಗಳ ಚಳುವಳಿ.
೪) ತಮಿಳುನಾಡಿನ ಜಸೀಸಪಾರ್ಟಿ ಸಂಘಟಿಸಿದ ಬ್ರಾಹ್ಮಣೇತರ ಚಳುವಳಿ.
೫) ಈ ವಿ ರಾಮಸ್ವಾಮಿ ನಾಯ್ಕರ್‌ರವರ ದ್ರವಿಡ ಕಜಗಂ ಹೋರಾಟ, ಈ
ಎಲ್ಲ ಚಳುವಳಿಗಳ ವಿವರಗಳನ್ನು ಕೊಡಲಾಗಿದೆ. ಭಾಗ ಎರಡರಲ್ಲಿ ಜನಸಂಖ್ಯಾ ತಜ್ಞ ಡಾ| ಎಸ್. ಚಂದ್ರಶೇಖರ ಮಿಲ್ಲರ್ ವರದಿ ಬಗ್ಗೆ ಬರೆಯುತ್ತಾ ಇದೊಂದು ಐತಿಹಾಸಿಕ ದಾಖಲೆ ಎಂದು ವರ್ಣಿಸಿದ್ದಾರೆ. ಏಕೆಂದರೆ ನಂತರ ಕರ್ನಾಟಕದಲ್ಲಿ ರೂಪಗೊಂಡ ಸಮಿತಿಗಳಿಗೆ ಮಿಲ್ಲರ್ ಸಮಿತಿಗೆ ಆಧಾರವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಬ್ರಾಹ್ಮಣೇತರರ ಬಗ್ಗೆ ಹೆಚ್ಚು ಒಲವಿತ್ತು ಎಂದು ಹೇಳಲಾಗುತ್ತದೆ, ಆಗಿನ ವಿದ್ಯಮಾನಗಳನ್ನು ಲೇಖಕರು ಹೀಗೆ ದಾಖಲಿಸಿದ್ದಾರೆ: ಎಂ. ವಿಶ್ವೇಶ್ವರಯ್ಯ ಕಳಿಸಿದ ದಾಖಲೆಗಳಿಗೆ ಮರುಟಿಪಣಿ ಬರದು ಕಳಿಸುತ್ತಿದ್ದರಂತೆ, ರವಿನು ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳ ನಾಮಕರಣ, ಬ್ರಾಹ್ಮಣೇತರರ ಹೆಸರು ಹಾಕಿ ಕಳಿಸುತ್ತಿದ್ದರಂತೆ. ಇಂತಹ ಸಂದರ್ಭಗಳಿಂದ ವಿಶ್ವೇಶ್ವರಯ್ಯ ಹಾಗೂ ಮಹಾರಾಜರ ಸಂಬಂಧಗಳು ಹೆಚ್ಚು ! ಬಿಗಡಾಯಿಸಿದವು. ಬಾಹ್ಮಣೇತರ ಹೋರಾಟಕ್ಕೆ ಒಂದು ತಾತ್ವಿಕ ಬುನಾದಿ ಒದಗಿಸಿದ ಕೀರ್ತಿ ಸರ್ ಸಿ. ಆರ್. ರೆಡ್ಡಿಯವರಿಗೆ ಸಲ್ಲುತ್ತದೆ. ಮೈಸೂರು ರಾಜ್ಯದ ಆಡಳಿತ ತಮಿಳು ಬ್ರಾಹ್ಮಣರ ನಿಯಂತ್ರಣದಲ್ಲಿ ಹೆಚ್ಚುಕಾಲ ಇತ್ತು. ಇದು ಮೈಸೂರು ಹಾಗೂ ಮದ್ರಾಸ ಬ್ರಾಹ್ಮಣರ ಘರ್ಷಣೆಯ ಮುಸುಕಿನ ಜಗಳವಾಯಿತು. ಆದರೂ ಮಿಲ್ಲರ್ ಸಮಿತಿ ಆರು ಸದಸ್ಯರಲ್ಲಿ ಇಬ್ಬರು ಬ್ರಾಹ್ಮಣರಿದ್ದರು. ಮಿಲ್ಲರ್ ಸಮಿತಿಯ ಕೆಲವು ಸಲಹೆಗಳನ್ನು ಅವರು ತಿರಸ್ಕರಿಸಿದ್ದರು. ಮಿಲ್ಲರ್ ಸಮಿತಿಯ ಉದ್ದೇಶ ಸಾರ್ವಜನಿಕ ಸೇವೆಗಳಲ್ಲಿ ಬ್ರಾಹ್ಮಣೇತರರಿಗೆ ಹೆಚ್ಚು ಪ್ರಾತಿನಿಧ್ಯ ಕೊಡುವದಾಗಿತ್ತು.
ಮಿಲ್ಲರ್ ಸಮಿತಿಯ ಪ್ರಕಾರ ಬ್ರಾಹ್ಮಣರು, ಯುರೋಪಿಯನ್ ಹಾಗೂ ಆಂಗ್ಲೋ ಇಂಡಿಯನ್ ಸಮೂಹಗಳನ್ನು ಬಿಟ್ಟು ಎಲ್ಲ ಸಮೂಹಗಳು ಹಿಂದುಳಿದವರ ಪಟ್ಟಿಯಲ್ಲಿ ಸೇರ್ಪಡೆ ಆದವು. ಅಸ್ಪಶ್ಯರನ್ನು ಡಿಪಸ್ ಕ್ಲಾಸ್ ಎಂದು ಕರೆಯಲಾಯಿತು. ಹಿಂದುಳಿದವರೆಂದು ಪರಿಗಣಿಸಲು ಯುವ ಸಮುದಾಯದಲ್ಲಿ ಇಂಗ್ಲಿಷ್ ಸಾಕ್ಷರತಾ ಪ್ರಮಾಣ ಶೇಕಡ ಐದಕ್ಕಿಂತ ಕಡಿಮೆ ಇದ್ದರೆ ಅವರನ್ನು ಹಿಂದುಳಿದವರೆಂದು ಪರಿಗಣಿಸಲಾಯಿತು.
ಮಿಲ್ಲರ್ ಸಮಿತಿ ವರದಿಯನ್ನು ಸರಕಾರಕ್ಕೆ ಒಪ್ಪಿಸಿತು. ಆದರೆ ಅನುಷ್ಠಾನ ಕಠಿಣವಾಗಿತ್ತು. ಬ್ರಾಹ್ಮಣರ ನಿಯಂತ್ರಣದಲ್ಲಿದ್ದ ಪತ್ರಿಕೆಗಳು ಮಿಲ್ಲರ್ ಸಮಿತಿಯ ಮೇಲೆ ವಾಗ್ದಾಳಿ ನಡೆಸಿದವು. ಏಕೆಂದರೆ ದಿವಾನ್‌ಗಿರಿ ಹುದ್ದೆ ಕೈ ತಪ್ಪಿತು, ವಿಶೇಷವಾಗಿ ಕ, ಓ ಶೇಷಯ್ಯ ಹೀಗೆ ಬೆಂಕಿ ಕಾರಿದರು: 'ಸಾರ್ವಜನಿಕ ಸೇವೆಯಲ್ಲಿ ದಕ್ಷತೆ ಮುಖ್ಯ ಆದರೆ ಜಾತಿ ಅಲ್ಲ' ಎಂದರು. ವೈರಿಯ ವೈರಿ ಗೆಳೆಯನಾಗುತ್ತಾನೆ ಎಂಬಂತೆ ತಮಿಳು ಹಾಗೂ ಮೈಸೂರಿನ ಮೀಸಲಾತಿ ವಿರೋಧಿಸುವ ಬ್ರಾಹ್ಮಣರು ಒಂದುಗೂಡಿದರು. ಇವರ ತಂತ್ರ ಹೇಗಿತ್ತೆಂದರೆ ಹೇಗಾದರೂ ಮಾಡಿ ಮಿರ್ಜಾ ಇಸ್ಮಾಯಿಲ್ಲರನ್ನು ಕೆಳಗಿಳಿಸುವುದಾಗಿತ್ತು.
ರಹಮತ್ ತರೀಕೆರೆ, ಡಿ. ವಿ. ಗುಂಡಪ್ಪನವರ ಬಗ್ಗೆ ಬರೆದ ಪುಸ್ತಕದಲ್ಲಿ ಎಂ. ವಿಶ್ವೇಶ್ವರಯ್ಯನವರು ರಾಜೀನಾಮೆ ಕೊಟ್ಟಾಗ ಅವರಿಗೆ ನೈತಿಕ ಬೆಂಬಲ ಒದಗಿಸಿದರು, ಮಿಲ್ಲರ್ ಸಮಿತಿಯಿಂದ ಜಾತಿ ಘರ್ಷಣೆ ಹುಟ್ಟುತ್ತದೆ ಎಂದು ವಾದಿಸಿದ್ದರು. ಮಿಲ್ಲರ್ ಸಮಿತಿಯನ್ನು ವಿರೋಧಿಸಿದ ಎಂ. ಸಿ. ರಂಗ ಅಯ್ಯಂಗಾರ್ ಮಿಲರ್ ಸಮಿತಿ ಬಗ್ಗೆ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದರು. ಶಿಕ್ಷಣ ಪಡೆಯಲು ಯಾರನ್ನೂ ತಡೆಹಿಡಿದಿಲ್ಲ ಎಂಬ ಹಸಿಸುಳನ್ನು ಪತ್ರಿಕೆಗಳು ಬರೆದವು. ಏಕೆಂದರೆ ಆ ಕಾಲದಲ್ಲಿ ಪರಿಶಿಷ್ಟರಿಗೆ ಶಾಲೆಯಲ್ಲಿ ಪ್ರವೇಶವೇ ಇರಲಿಲ್ಲ. ಶಿಕ್ಷಣ ಪಡೆಯುವ ಗುಣ ಬಾಹ್ಮಣರಲ್ಲಿ ರಕ್ತಗತವಾಗಿದೆ. ಶ್ರಮವಿಭಜನೆಯ ನಿಯಮದ ಪ್ರಕಾರ ಇತರ ಉದ್ಯೋಗ ಬೇರೆ ಬೇರೆ ಜಾತಿಯವರು ಮಾಡುತ್ತಿದ್ದಾರೆ. ಇದು ನೈಸರ್ಗಿಕ ನಿಯಮ ಎಂದು ಪೊಳ್ಳುವಾದ ಹರಿಬಿಟ್ಟರು. ಶೃಂಗೇರಿ
ಘೋಷಣೆಯ ನಂತರ ಎಲ್ಲರಿಗೂ ಶಾಲೆಯಲ್ಲಿ ಮುಕ್ತ ಪ್ರವೇಶ ದೊರೆಯಿತು. ಶಾಲೆಯಲ್ಲಿ ದಲಿತರು ಮೈಲಿಗೆ ನೋವು ಅನುಭವಿಸಬೇಕಾಯಿತು. ಜಸಿ ಭೀಮಯ್ಯನವರು ಅತ್ಯಂತ ನೋವಿನಿಂದ ತಮ್ಮ ಶಿಕ್ಷಣದ ಅನುಭವ ದಾಖಲಿಸಿದ್ದಾರೆ. ಬ್ರಾಹ್ಮಣಶಾಹಿಯ ವಿರುದ್ದ ಪ್ರತಿಭಟನೆಯೇನೊ ನಡೆಯಿತು. ಆ 1920 ರ ದಶಕದ ಕೊನೆಗೆ ಬೆಂಗಳೂರಲ್ಲಿ ಜರುಗಿದ ಗಣಪತಿ ಗಲಭೆಯಿಂದ ಮಿಲರ್ ಸಮಿತಿಗೆ ಹಿನ್ನಡೆ ಉಂಟಾಗಿ ಬೌದ್ಧಿಕ ವಲಯದಲ್ಲಿ ಎರಡು ಗುಂಪುಗಳು ಹುಟ್ಟಿಕೊಂಡವು. ಬ್ರಾಹ್ಮಣರ ಗುಂಪು ಮಿಲ್ಲರ್ ಸಮಿತಿ ವಿರೋಧಿಸಿದರೆ ಅಬಾಹಣ ಗುಂಪು ಸಮಿತಿಯ ವರದಿ ಬೆಂಬಲಿಸಿತು. ಬ್ರಾಹ್ಮಣ ಸಮುದಾಯ ತಾನು ಆಚರಿಸುವ ಸಂಪ್ರದಾಯವೇ ಶ್ರೇಷ್ಠ ಎಂಬ ನಂಬಿಕೆಯನ್ನು ಇಡೀ ಸಮುದಾಯದ ಮೇಲೆ ಹೇರಲು ಯತ್ನಿಸಿತು. ಅದಕ್ಕೆ ಒಂದು ಉದಾಹರಣೆ ಎಂದರೆ ಬಾಲ್ಯ ವಿವಾಹವನ್ನು ಕೇಂದ್ರ ನಿಯಂತ್ರಿಸಿದಾಗ ಮೈಸೂರು ಸರಕಾರ ಬಾಲ್ಯವಿವಾಹ ನಿಷೇಧಿಸಿತು. ಆದರೆ ಬ್ರಾಹ್ಮಣರ ಗುಂಪು ಆರ್ಯಧರ್ಮದ ಬಾಲ್ಯವಿವಾಹ ಸರ್ವಶೇಪ ಎಂಬ ಮೂರ್ಖ ನಂಬಿಕೆ ಬೆಂಬಲಿಸಿತು. ಯಾವುದೇ ಖಚಿತ ದಾಖಲೆಗಳಿಲ್ಲದೆ ಮಿಲ್ಲರ್ ಸಮಿತಿಯಿಂದ ಆಡಳಿತ ವ್ಯವಸ್ಥೆ ಕುಸಿಯಿತು ಎಂಬ ಆರೋಪ ಕಿರೀಟ ಸ್ಥಾನದಲ್ಲಿದ್ದ ಬ್ರಾಹ್ಮಣರು ಸುಳ್ಳು ಸುದ್ದಿ ಹಬ್ಬಿಸಿದರು. ಮೈಸೂರು ಸಂಸ್ಥಾನ 1920 ರಿಂದ 1940 ರ ಅವಧಿಯಲ್ಲಿ ಕೈಗಾರಿಕೆ, ವಿದ್ಯುತ್, ಶಿಕ್ಷಣ, ಬ್ಯಾಂಕಿಂಗ್, ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ದಾಖಲಾರ್ಹವಾಗಿದೆ. ಇದಕ್ಕೆ ಪೂರಕ ಕೋಷ್ಟಕ, ಅಂಕಿಸಂಖ್ಯೆ ಕೊಡಲಾಗಿದೆ.
ಮಿಲ್ಲರ್ ಸಮಿತಿ ವಿಮರ್ಶೆ
ಮದರಾಸ್ ಹಾಗೂ ಮಹಾರಾಷ್ಟ್ರದಲ್ಲಿ ಬೆಳೆದಂತೆ ಮೈಸೂರಿನಲ್ಲಿ ಹಿಂದುಳಿದವರ ಚಳುವಳಿ ಏಕೆ ಬೆಳೆಯಲಿಲ್ಲ ಎಂಬುದು ಬಿಡಿಸಲಾರದ ಒಗಟಾಗಿದೆ. ಜೊತೆಗೆ ಮಿಲ್ಲರ್ ಸಮಿತಿ ವರದಿ ಪರಿಣಾಮವಾಗಿ ಸರ್ ಎಂ. ವಿಶ್ವೇಶ್ವರಯ್ಯ, ರಾಜಿನಾಮೆ ನೀಡಬೇಕಾಯಿತು.
ಮುಖ್ಯವಾಗಿ ಮಿಲ್ಲರ್ ಸಮಿತಿ ಮಹಿಳೆಯರ ಅಸ್ತಿತ್ವವನ್ನು ಗಮನಿಸಲಿಲ್ಲ. ಆರ್.ಎಸ್.ಎಸ್, ಮುಖಂಡ ಮೋಹನ್ ಭಾಗವತ ಅವರು ಗಂಡು ಹೆಣ್ಣಿನ ಸಂಬಂಧ ಸನಾತನ ಧರ್ಮದ ಅಡಿಯಲ್ಲಿ ಗ್ರಹಿಸಿ ಪುರುಷ ಪ್ರಾಧಾನ್ಯತೆ ಪ್ರತಿಪಾದಿಸಿದರು. ವಿವಾಹ ಹಿಂದುಗಳಿಗೆ ಸಾಮಾಜಿಕ ಒಪ್ಪಂದ ಎಂದು ಹೇಳಿದ್ದಾರೆ. ಆದರೆ ಹಿಂದುಗಳಿಗೆ ವಿವಾಹ ಧಾರ್ಮಿಕ ಸಂಸ್ಕಾರ, ಮುಸ್ಲಿಮರಿಗೆ ಸಾಮಾಜಿಕ ಒಪ್ಪಂದ, ಕ್ರೈಸ್ತರಿಗೆ ವೈಯಕ್ತಿಕ ಒಪ್ಪಂದವಾಗಿದೆ. ಮಿಲ್ಲರ್ ಸಮಿತಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಉದ್ಯೋಗದ ಅವಕಾಶ ನೀಡಿಲ್ಲ. ಪ್ರಬಲ ಜಾತಿಗಳ 'ಹಿಂದುತ್ವದ' ಭ್ರಮೆಗೆ ಬಲಿಯಾಗಿದ್ದರಿಂದ ಮಿಲ್ಲರ್ ಸಮಿತಿ ಪೇಲವವಾಯಿತು. ಮಾಧ್ಯಮಗಳ ಮೇಲೆ ನಿಯಂತ್ರಣ ಹೊಂದಿದ ಬ್ರಾಹ್ಮಣರು ಪ್ರಬಲ ಜಾತಿಗಳಿಗೆ ಹಿಂದುತ್ವದ ಹೆಸರಿನಲ್ಲಿ ಬೆನ್‌ವಾಶ್ ಮಾಡಿದ್ದರಿಂದ ಇತರ ಜಾತಿ ಗುಂಪುಗಳಾದ ಕುರುಬ, ಪಂಚಾಳ, ಕುಂಬಾರ, ನೇಕಾರರನ್ನು ತನ್ನ ಗಣನೆಗೆ ತೆಗೆದುಕೊಳ್ಳಲಿಲ್ಲ. ಪ್ರಜಾಮಿತ್ರ ಮಂಡಳಿ ಪ್ರಬಲ ಜಾತಿಯ ಪಕ್ಷವಾಯ್ತು ಹಾಗೂ ಬೇಗನೇ ಅವಸಾನವಾಯಿತು. ಮೈಸೂರು ಸಂಸ್ಥಾನದಲ್ಲಿ ಬ್ರಾಹ್ಮಣೇತರ ಚಳುವಳಿ ಬೆಳೆಯಲಾರದ್ದಕ್ಕೆ ಸೈದ್ಧಾಂತಿಕ ಹಿನ್ನೆಲೆ ಕೊರತೆ ಮುಖ್ಯ ಕಾರಣವಾಗಿದೆ. ಪೆರಿಯಾರ್, ಫುಲೆ, ನಾರಾಯಣ ಗುರು ತಮ್ಮದೇ ಆದ ಕರ್ತವ್ಯದಿಂದ ಅಬ್ರಾಹ್ಮಣರಲ್ಲಿ ಜಾಗೃತಿ ಉಂಟು ಮಾಡಿದರು. ಮೈಸೂರಲ್ಲಿ ಚಾತುರ್ವಣ್ಯ್ರ ಪ್ರತಿಪಾದಕರು ಹಲವು ದೂರಗಾಮಿ - ತಂತ್ರಗಳನ್ನು ಬಳಸಿದರು. ಮುಖ್ಯವಾಗಿ ಬೆಂಗಳೂರಿನ ಗಣಪತಿ ಗಲಭೆಯನ್ನು ಹಿಂದು ಮುಸ್ಲಿಮರಲ್ಲಿ ಒಡಕು ಹುಟ್ಟಿಸಲು ಬಳಸಿದರು. ಮಿರ್ಜಾ ಇಸ್ಮಾಯಿಲ್ಲರಿಗೆ ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿದರು. ಒಟ್ಟಿಗೆ ಮಿಲ್ಲರ್ ಸಮಿತಿ ಬ್ರಾಹ್ಮಣೇತರರಿಗೆ ವಿಶೇಷ ಅವಕಾಶ ಒದಗಿಸುವಲ್ಲಿ ಸೋತಿತು.
ಅನುಬಂಧದಲ್ಲಿ ಮುಖ್ಯವಾಗಿ ಕರ್ಮಸಿದ್ಧಾಂತ ತಿರಸ್ಕರಿಸಿದ ಬುದ್ಧ, ಬಸವ, ಚಾರ್ವಾಕರ ಚಿಂತನೆ ಬಗ್ಗೆ ಸುದೀರ್ಘ ಚರ್ಚೆ ಇದೆ. ಇದು ಮೀಸಲಾತಿಗಾಗಿ ಜರಗುತ್ತಿರುವ ಹೋರಾಟ, 'ಹಿಂದು' ಭದಗೊಳಿಸುವ ದೂರಗಾಮಿ ತಂತ್ರ ಇದೆ.
(ಕೃಪೆ: ಹೊಸಮನುಷ್ಯ)
---
ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ: ಒಂದು ಅಧ್ಯಯನ ಕೃತಿಯ ವಿಮರ್ಶೆ
©2024 Book Brahma Private Limited.