'ಆರ್ಯಭಾಷಾ ವ್ಯಾಸಂಗ' (ಆರ್ಯಭಾಷೆಗಳ ತೌಲನಿಕ ವ್ಯಾಕರಣ) ಸಂಗಮೇಶ ಸವದತ್ತಿಮಠ ಅವರ ಅಧ್ಯಯನ ಗ್ರಂಥವಾಗಿದೆ. ಕನ್ನಡ ಭಾಷಾ ವಿಜ್ಞಾನದ ಪರಿಣತರಲ್ಲೊಬ್ಬರಾದ ಈ ಲೇಖಕರು ಬಹುಭಾಷೆಗಳಲ್ಲಿನ ಮೂಲಗ್ರಂಥಗಳನ್ನು ಅಭ್ಯಾಸ ಮಾಡಿ ಬರೆದಿರುವ ಆರ್ಯಭಾಷೆ ಗಳಲ್ಲಿನ ತುಲನಾತ್ಮಕ ವ್ಯಾಕರಣದ ಅಂಶಗಳನ್ನು ಭಾಷಾ ಪರಿಚಯ ಸಹಿತ ಸಂಕ್ಷಿಪ್ತ-ಸರಳವಾಗಿ ನಿರೂಪಿಸಿದ್ದಾರೆ. ಭಾಷಾವ್ಯಾಸಂಗದ ವಿದ್ಯಾರ್ಥಿಗಳಿಗಂತೂ ಅತ್ಯುಪಯುಕ್ತ ಕೃತಿ. ಆರ್ಯಭಾಷೆಗಳ ಅಧ್ಯಯನಕ್ಕೂ ಸಹಕಾರಿಯಾಗಬಲ್ಲುದು. ಆರ್ಯ-ದ್ರಾವಿಡರ ಮಧ್ಯೆ ಅನೇಕ ಶಬ್ದಗಳ ಕೊಡು-ಕೊಳ್ಳುವಿಕೆಯ ಸಾಧ್ಯತೆಯ ಪ್ರಸ್ತಾಪವಿದೆ.
ಡಾ. ಸಂಗಮೇಶ ಸವದತ್ತಿಮಠ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು. ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ...
READ MORE