ಕನಕದಾಸರ ವರಮೋಹನತರಂಗಿಣಿ

Author : ಎಮ್.ಆರ್. ಸತ್ಯನಾರಾಯಣ್

Pages 1420

₹ 1000.00




Year of Publication: 2019
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಪ್ರಕಾಶಕರು: ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

`ಕನಕದಾಸರ ವರಮೋಹನತರಂಗಿಣಿ’ ಎಂ.ಆರ್‌ ಸತ್ಯನಾರಾಯಣ ಅವರ ಕೃತಿಯಾಗಿದೆ. `ವರಮೋಹನತರಂಗಿಣಿ’ಯೆಂಬ ಸುಮಾರು 2799 ಸಾಂಗತ್ಯಪದ್ಯಗಳ ಈ ಮಹಾನ್‌ಕಾವ್ಯವು ವಿದ್ವಾಂಸರು ಹಾಗೂ ವಿಮರ್ಶಕರು ಇದುವರೆಗೆ ಮನಮೋಹಕವಾದ ಶೃಂಗಾರಕಾವ್ಯವೆಂದು ವರ್ಣಿಸಿ ವ್ಯಾಖ್ಯಾನಿಸಿದ ಕಾವ್ಯಶಿಲ್ಪ. ಶ್ರೀಕೃಷ್ಣ-ರುಕ್ಕಿಣಿ, ಶ್ರೀಕೃಷ್ಣನ ಮಗ ಪ್ರದ್ಯುಮ್ನ-ಮಾಯಾವತಿ ಹಾಗೂ ಶ್ರೀಕೃಷ್ಣನ ಮೊಮ್ಮಗ ಅನಿರುದ್ಧ ಉಷೆಯರ ಶೃಂಗಾರರಸಪರಿಪೂರ್ಣವಾದ ಲೀಲಾಕಥಾಮೃತವು ಈ ಕಾವ್ಯತರಂಗಿಣಿಯಲ್ಲಿ ಬತ್ತದ ನಿರಂತರ ಪ್ರವಾಹವಾಗಿ ಹರಿದು ರಸಿಕರ ಹೃದಯಸಾಗರಗಾಮಿನಿಯಾಗಿ ಸುಮಾರು ನಾಲ್ಕು ಶತಮಾನಗಳಿಂದಲೂ ಹರಿಯುತ್ತ ಬಂದಿದೆ. ಸಾಗರಗಳು ಉಪ್ಪಾಗಿರಬಹುದು ಆದರೆ ರಸಿಕರ ಹೃದಯಸಾಗರ ಉಪ್ಪಾಗಿಲ್ಲ! ಅದು ಮಧುರ. ಅದು ಲವಣಸಾಗರವಲ್ಲ. ಅದು ರಸಸಾಗರ, ಕ್ಷೀರಸಾಗರ, “ವರಮೋಹನತರಂಗಿಣಿ"ಯಂತಹ ಅಮೃತವಾಹಿನಿಯು ಕಾವ್ಯರಸಿಕರ ಹೃತ್‌ಕ್ಷೀರಸಾಗರಕ್ಕೆ ಮತ್ತಷ್ಟು ಮಾಧುರ್ಯವನ್ನು ಕೊಟ್ಟಿದೆ.

About the Author

ಎಮ್.ಆರ್. ಸತ್ಯನಾರಾಯಣ್

ಲೇಖಕ ಎಮ್.ಆರ್. ಸತ್ಯನಾರಾಯಣ್ ಅವರು ಮೂಲತಃ ಶಿವಮೊಗ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಿಂದ ಕನಕದಾಸರ ಕುರಿತ ಮೂರು ಸಂಪುಟಗಳ ಸಂಶೋಧನೆಯನ್ನು ಮಾಡಿರುತ್ತಾರೆ. ಕೃತಿಗಳು: ಕನಕದಾಸರ ವರಮೋಹನತರಂಗಿಣಿ ಸಂಪುಟ-1, ಕನಕದಾಸರ ವರಮೋಹನತರಂಗಿಣಿ ಸಂಪುಟ-2, ಕನಕದಾಸರ ವರಮೋಹನತರಂಗಿಣಿ ಸಂಪುಟ-3 ...

READ MORE

Related Books