`ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ' ಕೃತಿಯು ಉಪಿಂದರ್ ಸಿಂಗ್ ಅವರ ಇಂಗ್ಲಿಷ್ ಮೂಲ ಅಧ್ಯಯನ ಗ್ರಂಥವಾಗಿದ್ದು, ಗೊ.ರು. ಚನ್ನಬಸಪ್ಪ ಅವರು ಅನುವಾದಿಸಿದ್ದಾರೆ. ಈ ಕೃತಿಯು ಕ್ರಿ.ಪೂ. 600 ರಿಂದ ಕ್ರಿ.ಶ. 600ರವರೆಗಿನ ಸುಮಾರು ಒಂದು ಸಹಸ್ರಮಾನದ ಅವಧಿಯ ಸಾಹಿತ್ಯ ಮತ್ತು ಶಾಸನಗಳ ಸಮಗ್ರ ಸಮೀಕ್ಷೆಯಲ್ಲಿ ಪ್ರೊ. ಸಿಂಗ್ ಅವರು ಪ್ರಾಚೀನ ಭಾರತದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಮತ್ತು ಅವುಗಳ ಬಗ್ಗೆ ನಡೆದ ಬೌದ್ಧಿಕ ಚರ್ಚೆಗಳ ಚಾರಿತ್ರಿಕ ವಾಸ್ತವತೆಯನ್ನು ಪುನರ್ ನೆಲೆಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಹನವಾದ ವಿಶ್ಲೇಷಣೆ ಮತ್ತು ಸೈದ್ಧಾಂತಿಕ ತತ್ವಗಳಿಂದ ಇದನ್ನು ಅವರು ಭಾರತೀಯ ಸಾಂಸ್ಕೃತಿಕ ಇತಿಹಾಸದ ವಿದ್ಯಾರ್ಥಿಗಳಿಗೆಲ್ಲರಿಗೂ ಒಂದು ಅರ್ಥಪೂರ್ಣ ಮತ್ತು ಮೌಲಿಕ ಆಧಾರ ಗ್ರಂಥವನ್ನಾಗಿಸಿದ್ದಾರೆ. ಭಾರತದ ರಾಜಕೀಯ ಮತ್ತು ನೈತಿಕ ತತ್ವ ಸಿದ್ಧಾಂತಗಳಿಗೆ ಹಿಂಸೆ ಮತ್ತು ಅದಕ್ಕೆ ಪ್ರತಿಯಾದ ಅಹಿಂಸೆಗಳಷ್ಟು ಮುಖ್ಯ ವಸ್ತುಗಳಾಗಿರುವುದು ತೀರಾ ಕೆಲವೇ ವಿಷಯಗಳು. ಈ ಎಲ್ಲಾ ವಿಚಾರಗಳನ್ನು ನಾವು ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.