ಭಾರತೀಯ ಭಾಷೆಗಳ ಜನ ಪರಿವೀಕ್ಷಣೆಯಡಿ ಲೇಖಕರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಹಾಗೂ ಹೆಚ್.ಎಂ. ಮಹೇಶ್ವರಯ್ಯ ಅವರು ಜಂಟಿಯಾಗಿ ರಚಿಸಿದ ಕೃತಿ-ಕರ್ನಾಟಕದ ಭಾಷೆಗಳು. ಪ್ರೊ.ಜಿ.ಎನ್. ದೇವಿ ಅವರು ಪ್ರಧಾನ ಸಂಪಾದಕರು. ಭಾರತದಂತೆ ಕರ್ನಾಟಕವೂ ಸಹ ಸಾಂಸ್ಖತಿಕವಾಗಿ, ಭಾಷಿಕವಾಗಿ ವೈವಿಧ್ಯಮಯ ಪ್ರದೇಶ. ಕರ್ನಾಟಕದಲ್ಲಿಯ ಭಾಷೆಗಳ ಸ್ವರೂಪ-ಸ್ವಭಾವ ಮಾತ್ರವಲ್ಲ; ಆಡು ಮಾತಿನಲ್ಲಿರುವ ಭಾಷೆಗಳು, ಲಿಪಿಗಳ ಕುರಿತು ಸವಿವರವಾದ ಮಾಹಿತಿಯನ್ನೊಳಗೊಂಡ ಸಂಶೋಧನಾ ಕೃತಿ ಇದು. ಆಸಕ್ತ ವಿದ್ಯಾರ್ಥಿಗಳು ಹಾಗೂ ಬೋಧಕರಿಗೂ ಈ ಕೃತಿ ಉಪಯುಕ್ತ.
ರಾಜೇಶ್ವರಿ ಮಹೇಶ್ವರಯ್ಯ ಕನ್ನಡದಲ್ಲಿ ಸ್ನಾತಕೋತ್ತರ ಮತ್ತು ಭಾಷಾವಿಜ್ಞಾನದಲ್ಲೂ ಸ್ನಾತಕೋತ್ತರ, ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತಃ ಧಾರವಾಡದವರಾದ ಅವರು 1956 ನವೆಂಬರ್ 01 ರಲ್ಲಿ ಜನಿಸಿದರು. ತಂದೆ ರಾಚಯ್ಯನವರು ವಸ್ತದ, ತಾಯಿ ಸುಶೀಲಾದೇವಿ. ಇವರ ಕೃತಿಗಳು : ಶ್ರೀದಾನಮ್ಮ ತಾಯಿ (ಜೀವನ ಚರಿತ್ರೆ), ವೀರಶೈವ ಕವಯಿತ್ರಿಯರು (ಧಾರ್ಮಿಕ ಸಾಹಿತ್ಯ), ಭಾಷೆ ಸಮಾಜ ಸಂಸ್ಕೃತಿ (ಸಂಶೋಧನೆ), ಆಧುನಿಕ ವರ್ಣನಾತ್ಮಕ ಭಾಷಾ ವಿಜ್ಞಾನ, ಅಭಿನವ ವಿವೇಕಾನಂದ (ಜೀವನಚರಿತ್ರೆ), ಜ್ಞಾನಬಾಗಿನ (ಮಹಿಳಾ ಅಧ್ಯಯನ ಸಂಪಾದಿತ ಕೃತಿ), ವಚನಾಂಜಲಿ(ಅಧುನಿಕ ವಚನಗಳು), ಭಕ್ತಿ ಕುಸುಮಾಂಜಲಿ (ಅಧ್ಯಾತ್ಮಿಕ ವಚನಗಳು), ಅದ್ಭುತ ಅಮೆರಿಕ ಮತ್ತು ಅನ್ಯರಾಷ್ಟ್ರಗಳಲ್ಲಿ (ಪ್ರವಾಸ ಕಥನ), ಧ್ಯಾನಮಾರ್ಗ, ಶ್ರೀ ಚೌಡೇಶ್ವರಿ ಚರಿತ್ರೆ, ಮಕ್ಕಳು ಮತ್ತು ಶಿಕ್ಷಣ ...
READ MORE