ಕನ್ನಡ ಸಾಹಿತ್ಯದಲ್ಲಿ ಜೀವನಮೌಲ್ಯ ಮಾಲಿಕೆ: ಸಾಂಗತ್ಯ ಕಾವ್ಯ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಈ ಕೃತಿಯನ್ನು ಬರೆದಿದ್ದಾರೆ. ಕನ್ನಡದ ಸಾಂಗತ್ಯ ಕಾವ್ಯಗಳಲ್ಲಿರುವ ಅಹಿಂಸೆ, ಸತ್ಯ, ವೈರಾಗ್ಯ, ದಾನ, ಸಂಸ್ಕೃತಿ, ಪರಿಸರಪ್ರೀತಿ ಮುಂತಾದ ಹಲವಾರು ಉನ್ನತ ಜೀವನಮೌಲ್ಯಗಳ ಕುರಿತ ವಿಸ್ತಾರವಾದ ವಿವೇಚನೆ ಇದೆ. ಸು.ಮೂವತ್ತೆಂಟು ಸಾಂಗತ್ಯ ಕಾವ್ಯಗಳಿಂದ ಆಯ್ದ ನೂರಾರು ಉದಾಹರಣೆಗಳು ಇಲ್ಲಿವೆ. ನಮ್ಮ ಪ್ರಾಚೀನ ಕವಿಪರಂಪರೆ ಬದುಕಿನ ಮೌಲ್ಯಗಳನ್ನು ಕಾವ್ಯಗಳ ಮೂಲಕ ಪ್ರತಿಪಾದಿಸಿದ ಬಗೆಯನ್ನು ಇಲ್ಲಿ ನೋಡಬಹುದು.
ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು. ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...
READ MORE