ಪತ್ರಕರ್ತ ಪಿ. ಲಂಕೇಶ್ ರಾಜಕಾರಣವನ್ನು ನೋಡಿದ ಬಗೆ ಭಿನ್ನವಾದುದು. ’ನನ್ನ ಹಸಿದ ಹಲ್ಲಿಗೆ, ನಿಮ್ಮ ಮೈಸೂರು ಮಲ್ಲಿಗೆ’ ಎಂದು ಕವಿಗಳನ್ನು ಕಾಲೆಳೆದಂತೆಯೇ ರಾಜಕಾರಣವನ್ನು ತಮ್ಮ ಹದ್ದಿನ ಕನ್ಣಿನಿಂದ ನೋಡುತ್ತಿದ್ದರು. ಅವರ ಲೇಖನಿ ಎಂಬ ಅಡಕತ್ತರಿಗೆ ಸಿಗದ ಎರಡು ದಶಕಗಳ (೧೯೮೦-೨೦೦೦) ರಾಜಕಾರಣಿಗಳೇ ಇರಲಿಲ್ಲ.
ಪ್ರಜಾವಾಣಿ ಬಳಗದಲ್ಲಿರುವ ಪತ್ರಕರ್ತ ಕೆ. ರಾಘವೇಂದ್ರ ತೊಗರ್ಸಿ ಲಂಕೇಶರ ರಾಜಕೀಯ ನಿಲುವುಗಳು ಹಾಗೂ ಅವರ ಚಿಂತನಾಕ್ರಮವನ್ನು ಅವಲೋಕಿಸಿದ್ದಾರೆ.
©2024 Book Brahma Private Limited.