ಸಂತೋಷ ಶಿವುಲಾಲ್ ರಾಠೋಡ್ ಅವರ ಅಧ್ಯಯನ ಕೃತಿ ಬಂಜಾರಾ ಚರಿತಾಮೃತ. ಸಂತೋಷ ಶಿವುಲಾಲ್ ರಾಠೋಡ್ ರವರು ಬಂಜಾರಾ ಸಮುದಾಯದ ಅಭಿವೃದ್ಧಿಗೋಸ್ಕರ 12 ವರ್ಷಗಳ ಕಾಲ 14 ರಾಜ್ಯಗಳನ್ನು ಸುತ್ತಾಡಿ ಸಂಶೋದಿಸಿರುವ ಗ್ರಂಥವಾಗಿರುತ್ತದೆ. ಇದು ಬಂಜಾರ ಸಮುದಾಯದ ಗತ ಇತಿಹಾಸದ ದಾಖಲೆಗಳ ಹಲವಾರು ಗ್ರಂಥಗಳನ್ನು ಪರಾಮರ್ಶೆ ಮಾಡಿ ಐತಿಹಾಸಿಕ ಬರಹಗಳು ಹಾಗೂ ಬಂಜಾರಾ ಜನರ ಜೀವನ ಪರಿಚಯಿಸುವ ಅವರ ಉಡುಗೆ ತೋಡುಗೆ, ನಡೆ ನುಡಿ, ಆಚಾರ-ವಿಚಾರ, ಹಬ್ಬ-ಹರಿದಿನ, ಗೀತ-ಗಾನ, ಉತ್ಸವೋಲ್ಲಾಸಗಳ ಪರಿಣಾಮಕಾರಿ ಚಿತ್ರಣ ಇಲ್ಲಿದೆ. ಸಂತ-ಮಹಂತರ್, ಶ್ರೇಷ್ಠ ವ್ಯಕ್ತಿಗಳ ಕಾರ್ಯದರ್ಶನಕ್ಕಿಲ್ಲಿ ಅವಕಾಶ. ಸಮಾಜ ಶಾಸ್ತ್ರಜ್ಞರು ಮೆಚ್ಚಬಹುದಾದ., ಯುವಕರು ಅವಶ್ಯ ತಿಳಿಯಬಹುದಾದ ವಿಶಿಷ್ಟ ಕೃತಿಯಾಗಿರುತ್ತದೆ. ಮಾಡಿರುವ ಅಪರೂಪ ಐತಿಹಾಸಿಕ ರೂಪದ ಪ್ರಬಂಧವಾಗಿದೆ.
ಸಂತೋಷ ಶಿವುಲಾಲ್ ರಾಠೋಡ್ ರವರು ಬಂಜಾರಾ ಸಮುದಾಯದವರಾಗಿದ್ದು, ಸಮುದಾಯದ ಅಭಿವೃದ್ಧಿಗೋಸ್ಕರ ಸಾಕಷ್ಟು ದುಡಿದವರು. ಈ ನಿಟ್ಟಿನಲ್ಲಿ ಅನೇಕ ಕೃತಿಗಳನ್ನೂ ರಚಿಸಿದವರು. ...
READ MORE