‘ಆಧುನಿಕ ಜಾನಪದ’ ಎಂಬುದು ನಾಗಭೂಷಣ ಬಗ್ಗನಡು ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ಪ್ರಬಂಧದ ಪ್ರಕಟಿತ ಕೃತಿ. ನಗರ ಜಾನಪದ, ಆಡುಮಾತಿನ ಜಾನಪದ, ಸಮೂಹ ಜಾನಪದ, ವಾಹನ ಜಾನಪದ, ಲಿಖಿತ ಜಾನಪದ, ಪರಿಸರ ಜಾನಪದ ಹೀಗೆ ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ವೊದಲ ಮತ್ತು ಎರಡನೇ ಅಧ್ಯಾಯಗಳಲ್ಲಿ ಜಾನಪದ ಚಿಂತನಾ ಕ್ರಮಗಳು, ಆಧುನಿಕ ಯುಗದಲ್ಲಿ ಜಾನಪದ ಪಡೆದುಕೊಳ್ಳುತ್ತಿರುವ ಬದಲಾದ ಸ್ವರೂಪ, ನಗರ ಜಾನಪದ, ನಗರ ಜನರ ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು. ವೈಯಕ್ತಿಕ ನಂಬಿಕೆಗಳನ್ನು ವಿವರಿಸಲಾಗಿದೆ. ಸಮೂಹ ಮಾಧ್ಯಮ ಮತ್ತು ಜಾನಪದ, ಪತ್ರಿಕೋದ್ಯಮ ಮತ್ತು ಜಾನಪದ, ಚಲನಚಿತ್ರಗಳಲ್ಲಿ ಜನಪದ ಭಾಷೆ, ದೂರದರ್ಶನದಲ್ಲಿ ಪರಿಸರ ಜಾನಪದ, ಕಾಮ-ಪ್ರೇಮ ಪ್ರಚೋದಿತ ಜಾನಪದ ಬರಹಗಳು ಮುಂತಾದ ವಿಷಯಗಳನ್ನು ವಿಶ್ಲೇಷಿಸಲಾಗಿದೆ.
©2024 Book Brahma Private Limited.