ಲೇಖಕ ಡಾ. ಗುರುಲಿಂಗಪ್ಪ ಧಬಾಲೆ ಅವರ ಸಂಶೋಧನಾತ್ಮಕ ಬರಹಗಳ ಸಂಗ್ರಹ ಕೃತಿ-ಗಡಿ ನೆಲದ ನಿಧಾನ. ಆಗಾಗ ಲೇಖಕರು ಬರೆದ ಒಟ್ಟು 16 ಲೇಖನಗಳಿದ್ದು, ಅಷ್ಟ ವರ್ಣದ ಕಲ್ಪನೆಯ ಅನನ್ಯತೆ, ಅಂಬಿಗರ ಚೌಡಯ್ಯ ವಚನಗಳಲ್ಲಿ ಸಾಮಾಜಿಕ ವಿಡಂಬನೆ, ವಚನಸಾಹಿತ್ಯ ಯುವಜನತೆ ಮತ್ತು ಸಹನ -ಅ ಸಹನೆ ಲೇಖನಗಳಲ್ಲಿ ವಚನದ ಹಿರಿಮೆ-ಗರಿಮೆಗಳನ್ನು ಎತ್ತಿಹಿಡಿದು ವಿಶ್ಲೇಷಿಸಿದ್ದಾರೆ. ಕನ್ನಡದಲ್ಲಿ ವಚನ ದಾಸ ಪರಂಪರೆಯಂತೆ ತತ್ವಪದದ ಪರಂಪರೆಯು ಹರಿದು ಬಂದಿದ್ದು ಅಲ್ಲಿನ ಆಳ -ಅಗಲ ವೈಭವವನ್ನು ಒಂದು ಲೇಖನದಲ್ಲಿ ಸಶಕ್ತವಾಗಿ ವಿವರಿಸಿದ್ದಾರೆ. ಅಲಕ್ಷಿತ ಸಾಹಿತ್ಯ ಪರಂಪರೆಯ ಕಡೆಗೆ ಅವರು ಓದುಗರ ಗಮನ ಸೆಳೆದಿದ್ದಾರೆ.. ಕನ್ನಡ ನಾಡು,ನುಡಿ ಸಾಹಿತ್ಯ ಸಂಸ್ಕೃತಿಗಳ ಕುರಿತು ಹಾದು ಬಂದಿರುವ ಲೇಖನಗಳಲ್ಲಿ ಗುರಲಿಂಗಪ್ಪ ಧಬಾಲೆ ಅವರ ವಿವೇಕ ದೂರದೃಷ್ಟಿ ಸಮತೆ, ಮಮತೆ ಗುಣಗಳು ಬೆರೆತುಕೊಂಡಿರುವುದು ವಿಶೇಷ.
©2025 Book Brahma Private Limited.