‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಡಾ. ಅನಿಲ್ ಕುಮಾರ್ ಶೆಟ್ಟಿ ಅವರ ಸಂಶೋಧನಾ ಗ್ರಂಥವಾಗಿದೆ. ಉಡುಪಿಯಲ್ಲಿ 20ನೇ ಶತಮಾನದಲ್ಲಿ ನಡೆದ ಸಾಹಿತ್ಯಕ್ಷೇತ್ರದ ಚಟುವಟಿಕೆಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳ ವಿಷಯದಲ್ಲಿ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ಹೊರತಂದಿದ್ದಾರೆ. ಅಷ್ಟೇಅಲ್ಲದೆ ಉಡುಪಿ ಜಿಲ್ಲೆಯ ಇತಿಹಾಸ, ಉಡುಪಿ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ, ಶೆಟ್ಟಿಗಾರರು/ಸಾಲಿಗಾರರು, ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ಯ್ರ ಚಳುವಳಿ: ಸಾಮಾಜಿಕ ಕಾರಣ, ಶೈಕ್ಷಣಿಕ ಕಾರಣ, ರಾಜಕೀಯ ಕಾರಣಗಳು, ಉಡುಪಿ ಜಿಲ್ಲಾ ಸಾಹಿತ್ಯದ ವೈಶಿಷ್ಟ್ಯಗಳು/ಸ್ವರೂಪ, ಆಧುನಿಕ ಕಾಲದ ಕಾರ್ಕಳ ತಾಲೂಕು ವ್ಯಾಪ್ತಿಯ ಸಾಹಿತ್ಯರಚನೆಗಳು ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದಂತಹ ಹಲವಾರು ವಿಚಾರಗಳು ಇಲ್ಲಿ ಪ್ರಸ್ತಾಪವಾಗಿದೆ.
©2024 Book Brahma Private Limited.