ಕಥೆಗಳಲ್ಲಿ ಕಂಡ ಗಾಂಧಿ-ಲೇಖಖ ಎಂ.ವಿ. ನಾಗರಾಜರಾವ್ ಅವರ ಕೃತಿ. ರಕ್ತ-ಮಾಂಸವಿರುವ ಮಹಾತ್ಮಗಾಂಧಿ ಎಂಬ ಮನುಷ್ಯನು ಈ ಭೂಮಿಯ ಮೇಲೆ ಇದ್ದನೆ ಎಂದು ಸ್ವತಃ ಭವಿಷ್ಯ ಅಚ್ಚರಿ ಪಡುತ್ದೆ ಎಂದು ವಿಜ್ಞಾನಿ ಐನ್ ಸ್ಟಿನ್ ಹೇಳಿದ್ದರು. ಇಂತಹ ವ್ಯಕ್ತಿಯ ವ್ಯಕ್ತಿತ್ವ ಕುರಿತು ವಿವಿಧ ಭಾಷೆಗಳಲ್ಲಿ ಅಸಂಖ್ಯ ಜೀವನ ಚರಿತ್ರೆಗಳು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೂಡಿ ಬಂದಿದ್ದು ಹೊಸದೇನಲ್ಲ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ, ಗಾಂಧೀಜಿ ಅವರನ್ನು, ಇಂದಿಗೂ ರಾಶಿರಾಶಿಯಾಗಿ ಬರುವ ಯಾವುದೇ ಪ್ರಕಾರದ ಸಾಹಿತ್ಯವು ಹಳೆಯದು ಎನಿಸದು. ಕಾಲ ಬದಲಾಗುತ್ತಿದ್ದರೂ ಗಾಂಧೀಜಿ ಜೀವನ ಮೌಲ್ಯ ಹಳತು ಎನಿಸುತ್ತಿಲ್ಲ. ಹೀಗಾಗಿ, ಕಥೆ-ಕಾದಂಬರಿ, ಕವಿತೆಗಳಲ್ಲಿ ಗಾಂಧೀಜಿ ಪ್ರಸ್ತಾಪವಾಗುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ, ಲೇಖಕರು ತಾವು ಓದಿದ ಕಥೆಗಳ ಪೈಕಿ ಗಾಂಧೀಜಿಯ ಪ್ರಸ್ತಾಪವಿರುವ 75 ಹೃದಯಸ್ಪರ್ಶಿ ಕಥೆಗಳನ್ನು ಆಯ್ದು, ಕಥೆಗಾರನ ದೃಷ್ಟಿಕೋನವನ್ನು ಬಿಂಬಿಸುವಲ್ಲಿ ಯತ್ನಿಸಿರುವುದು ಈ ಕೃತಿಯ ವೈಶಿಷ್ಟ್ಯ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು 242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ. ಅನುವಾದಿತ ಕೃತಿಗಳು : ಜೇಮ್ಸ್ ಹ್ಯಾಡ್ಲಿ ...
READ MORE