‘ರಾಮದುರ್ಗಾ ಸಂಸ್ಥಾನ: ವಿಮೋಚನಾ ಹೋರಾಟ’ ಕೃತಿಯು ಎ.ಬಿ. ವಗ್ಗರ ಅವರ ಅಧ್ಯಯನ ಕೃತಿಯಾಗಿದೆ. ಚರಿತ್ರೆಯ ಒಂದು ಭಾಗವಾಗಿ ರಾಮದುರ್ಗ ಸಂಸ್ಥಾನದ ಆಡಳಿತಾತ್ಮಕ ಸ್ವರೂಪದ ಜೊತೆಗೆ ಪ್ರಜೆಗಳ ವಿಮೋಚನಾ ಹೋರಾಟವನ್ನು ಪರಿಚಯಿಸಲಾಗಿದೆ. ಬ್ರಿಟಿಷ್ ಆಡಳಿತದ ನಿಯಂತ್ರಣ ಹೊಂದಿದ್ದ ಇಂತಹ ಸಂಸ್ಥಾನಗಳು ತಮ್ಮ ಅಸ್ತಿತ್ವಕ್ಕಾಗಿ ಆಂಗ್ಲರೊಂದಿಗೆ ಹೋರಾಡಿದರೆ, ಸಂಸ್ಥಾನದ ದಬ್ಬಾಳಿಕೆ ವಿರುದ್ಧ ಇನ್ನೊಂದು ಹಂತದಲ್ಲಿ ಅಲ್ಲಿನ ಪ್ರಜೆಗಳೇ ಬಂಡಾಯ ಎದ್ದಿದ್ದರು. ರಾಮದುರ್ಗದ ಅಂದಿನ ರಾಜಕೀಯ ಹಿನ್ನಲೆ, ಆರ್ಥಿಕ ಸ್ಥಿತಿ, ಶೈಕ್ಷಣಿಕ ವ್ಯವಸ್ಥೆ, ಭಾಷಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ನಮಗೆ ಇಂಥ ಪುಸ್ತಕಗಳಿಂದ ತಿಳಿದುಬರುತ್ತದೆ. ಅಪರೂಪದ ಸ್ವಾತಂತ್ರ್ಯಪೂರ್ವ ಸ್ಥಳೀಯ ಘಟನೆಗಳ ಚಿತ್ರಗಳ ಸಂಗ್ರಹವೂ ಇದೆ. ಬ್ರಿಟಿಷರ ಆಡಳಿತಕ್ಕೆ ಅನುಕೂಲವಾಗಿದ್ದ ಸ್ಥಳೀಯ ಅಧಿಕಾರಿಗಳು, ಕಂದಾಯ ವಿಭಾಗದ ದೊಡ್ಡ ದೊಡ್ಡ ಜಮೀನ್ದಾರರೊಂದಿಗೆ ಶಾಮೀಲಾದ ಇಲ್ಲಿನ ಅಧಿಕಾರಿವರ್ಗದ ವಿರುದ್ಧ ಸಾಕಷ್ಟು ಬಂಡಾಯವೆದ್ದ ಘಟನೆಗಳಲ್ಲಿ ಓದಬಹುದು.
(ಹೊಸತು, ಜುಲೈ 2012, ಪುಸ್ತಕದ ಪರಿಚಯ)
ಚರಿತ್ರೆಯ ಒಂದು ಭಾಗವಾಗಿ ರಾಮದುರ್ಗ ಸಂಸ್ಥಾನದ ಆಡಳಿತಾತ್ಮಕ ಸ್ವರೂಪದ ಜೊತೆಗೆ ಪ್ರಜೆಗಳ ವಿಮೋಚನಾ ಹೋರಾಟವನ್ನು ಪರಿಚಯಿಸಲಾಗಿದೆ. ಬ್ರಿಟಿಷ್ ಆಡಳಿತದ ನಿಯಂತ್ರಣ ಹೊಂದಿದ್ದ ಇಂತಹ ಸಂಸ್ಥಾನಗಳು ತಮ್ಮ ಅಸ್ತಿತ್ವಕ್ಕಾಗಿ ಆಂಗ್ಲರೊಂದಿಗೆ ಹೋರಾಡಿದರೆ, ಸಂಸ್ಥಾನದ ದಬ್ಬಾಳಿಕೆ ವಿರುದ್ಧ ಇನ್ನೊಂದು ಹಂತದಲ್ಲಿ ಅಲ್ಲಿನ ಪ್ರಜೆಗಳೇ ಬಂಡಾಯ ಎದ್ದಿದ್ದರು. ರಾಮದುರ್ಗದ ಅಂದಿನ ರಾಜಕೀಯ ಹಿನ್ನಲೆ, ಆರ್ಥಿಕ ಸ್ಥಿತಿ, ಶೈಕ್ಷಣಿಕ ವ್ಯವಸ್ಥೆ, ಭಾಷಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ನಮಗೆ ಇಂಥ ಪುಸ್ತಕಗಳಿಂದ ತಿಳಿದುಬರುತ್ತದೆ. ಪ್ರಜೆಗಳ ಹೋರಾಟ ಮುಂದೆ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಕೈಜೋಡಿಸಿ ಸ್ವತಂತ್ರ ಭಾರತದೊಂದಿಗೆ ರಾಮದುರ್ಗ ಸಂಸ್ಥಾನ ವಿಲೀನಗೊಂಡಿತು. ವರದೊಳಗಿನ ಬ್ರಿಟಿಷ್ ಚಕ್ರಾಧಿಪತ್ಯದ ಆಡಳಿತ ವೈಖಿಗಿ, ಅಮಾನವೀಯ ಕೃತ್ಯಗಳ ಪುರಾವೆಗಾಗಿ ಸರಕಾರಿ ದಾಖಲೆಗಳನ್ನಿಲ್ಲಿ ಕಲೆಹಾಕಲಾಗಿದೆ. ಅಪರೂಪದ ಸ್ವಾತಂತ್ರ್ಯಪೂರ್ವ ಸ್ಥಳೀಯ ಘಟನೆಗಳ ಚಿತ್ರಗಳ ಸಂಗ್ರಹವೂ ಇದೆ. ಬ್ರಿಟಿಷರ ಆಡಳಿತಕ್ಕೆ ಅನುಕೂಲವಾಗಿದ್ದ ಸ್ಥಳೀಯ ಅಧಿಕಾರಿಗಳು, ಕಂದಾಯ ಏಭಾಗದ ದೊಡ್ಡ ದೊಡ್ಡ ಜಮೀನ್ದಾರರೊಂದಿಗೆ ಶಾಮೀಲಾದ ಇಲ್ಲಿನ ಅಧಿಕಾರಿವರ್ಗದ ವಿರುದ್ಧ ಸಾಕಷ್ಟು ಬಂಡಾಯವೆದ್ದ ಘಟನೆಗಳಲ್ಲಿ ಓದಬಹುದು. ಸಂಪೂರ್ಣ ಹೋರಾಟದ ವಿವರ ಇಲ್ಲಿ ಲಭ್ಯ.
©2024 Book Brahma Private Limited.