ಡಾ. ಎ.ಬಿ. ವಗ್ಗರ ಅವರು ಎಂ.ಎ, ಎಂಫಿಲ್, ಪಿಎಚ್ ಡಿ, ಹಾಗೂ ಎಪಿಗ್ರಫಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಎಸ್.ಎಸ್. ಪ್ರಥಮ ದರ್ಜೆ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಮದುರ್ಗ ಸಂಸ್ಥಾನ ವಿಮೋಚನಾ ಹೋರಾಟ ಕೃತಿ ಬರೆದಿದ್ದು, 35 ಸಂಶೋಧನಾತ್ಮಕ ಲೇಖನಗಳು ಹಾಗೂ ಹಲವು ವಿಷಯಗಳಿಗೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿದ್ದಾರೆ. ಐಸಿಎಚ್ ಆರ್ ನವದೆಹಲಿ ಪ್ರಕಟಿಸಿದ ‘ಹುತಾತ್ಮರ ನಿಘಂಟು: ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಟ (1857-1947)-ಕರ್ನಾಟಕ ಪ್ರದೇಶ, ಯೋಜನೆಗೆ ಸಹಾಯಕ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಡಿ ಗದಗ ಜಿಲ್ಲಾ ಗೆಜೆಟಿಯರ್ ರಚನೆ ಕುರಿತು ಕೆಲಸ ಮಾಡುತ್ತಿದ್ದು, ಯುಜಿಸಿಯ ‘ನರಗುಂದ ಸಂಸ್ಥಾನ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಕಿತ್ತೂರು ಸಂಸ್ಥಾನದ ದಾಖಲೆಗಳ ಶೋಧ-ಅನುವಾದ ಹಾಗೂ ಪ್ರಕಟಣೆ ಯೋಜನೆಯ ನಿರ್ದೇಶಕ-ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.