‘ಪ್ರಾಚೀನ ಕನ್ನಡ ಕಾವ್ಯ- 2’ ತೀ.ನಂ ಶಂಕರನಾರಾಯಣ ಅವರ ಪ್ರಧಾನ ಸಂಪಾದಕತ್ವ ಹಾಗೂ ಜಿ. ಜಯದೇವಪ್ಪ, ಜೆ.ಕೆ. ರಮೇಶ್ ಅವರ ಸಂಪಾದಕತ್ವದ ಕೃತಿಯಾಗಿದೆ. ಗಳಿತ ರಣೋತ್ಸಾಹವಾಯ್ತು ಹೃದಯಂ, ದೇವಿಯ ಜಾತ್ರೆ(ರನ್ನ), ವಚನಗಳು(ಅಕ್ಕಮಹಾದೇವಿ), ಕೀಳಾರು- ಮೇಲಾರು?(ರಾಘವಾಂಕ), ಕೀರ್ತನೆಗಳು(ಕನಕದಾಸ), ಗೋವಿನ ಹಾಡು, ಜನಪದ ಕಾವ್ಯ, ಲೋಕದೊಳೀತನೆ ಪರಮಾರ್ಥಂ ಸುಖ(ಶಿವಕೊಟ್ಯಾಚಾರ್ಯ), ಟಿಪ್ಪಣಿಗಳು ಅಧ್ಯಾಯವನ್ನು ಒಳಗೊಂಡಿದೆ.
ಜಾನಪದ ವಿದ್ವಾಂಸರು, ಚಿಂತಕರು, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಂಶೋಧಕರು ತೀರ್ಥಪುರ ನಂಜುಂಡಯ್ಯ ಶಂಕರನಾರಾಯಣ. ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ 1947 ಸಪ್ಟೆಂಬರ್ 27. ‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಪರಿಸರ ವಿಜ್ಞಾನ, ಪಾರಾಮನೋವಿಜ್ಞಾನ, ಮಾನವ ವಿಜ್ಞಾನ, ಇತಿಹಾಸ, ರಾಜಕೀಯ ವಿಜ್ಞಾನ ಮುಂತಾದವುಗಳಲ್ಲಿ ಆಸಕ್ತರಾಗಿದ್ದು ಪದವಿ ತರಗತಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ, ತೌಲನಿಕ ಕಾವ್ಯ ಮೀಮಾಂಸೆ, ಛಂದಸ್ಸು, ಜಾನಪದ ವಿಜ್ಞಾನ ಮುಂತಾದ ವಿಷಯಗಳನ್ನು ಬೋಧಿಸಿದ್ದಾರೆ. ಹೀಗೆ ...
READ MORE