ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿಯುಳ್ಳ ಲೇಖಕ ಮಾಧವ ಐತಾಳ್ ಅನುವಾದಿಸಿರುವ ಕೃತಿ ಇದು. ಪಾಂಡುರಂಗ ಹೆಗಡೆ, ಸತೀಶ್ ಚಂದ್ರನ್ ನಾಯರ್, ಮಾಧವ್ ಗಾಡ್ಗೀಳ್, ವಂದನಾ ಶಿವ, ಕ್ಲಾಡ್ ಅಲ್ವಾರೆಸ್, ರಿತ್ವಿಕ್ ದತ್ತ, ರೊಮುಲಸ್ ವಿಟೇಕರ್, ನಿತಿನ್ ಡಿ ರೈ, ವಿಜು ಬಿ, ಕಮಲಾಕರ್ ಬಟ್ ಮತ್ತು ಹೆಚ್ ಎ ಕಿಶೋರ್ ಕುಮಾರ್ ಅವರು ಬರೆದಿರುವ ಲೇಖನಗಳ ಅನುವಾದವನ್ನು ಇಲ್ಲಿ ಒಟ್ಟಿಗೆ ಸೇರಿಸಿ ಈ ಕೃತಿಯನ್ನು ಸಂಫಾದಿಸಿದ್ದಾರೆ ಐತಾಳ್ ಅವರು. “ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ದೀರ್ಘ ಕಾಲದಿಂದ ಸಂಶೋಧನೆ, ಕ್ಷೇತ್ರಕಾರ್ಯ ಹಾಗೂ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು / ಕಾರ್ಯಕರ್ತರು ಬರೆದ ಈ ಪುಸ್ತಕ ಮುಂಬರುವ ಜನಾಂದೋಲನಗಳಿಗೆ ಉಪಯುಕ್ತವಾಗಲಿದೆ; ಮುನ್ನಡೆಯಬೇಕಾದ ದಾರಿಗಳನ್ನು ತೋರಿಸಲಿದೆ ಎಂಬುದು ನನ್ನ ನಂಬಿಕೆ” ಎಂದು ಬೆನ್ನುಡಿಯಲ್ಲಿ ಶಶಾಂಕ್ ಎಸ್ ಆರ್ ಹೇಳಿದ್ದಾರೆ.
©2025 Book Brahma Private Limited.